ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆವರಗೆರೆ ಚಂದ್ರು, ಎಚ್.ಜಿ. ಉಮೇಶ್, ಕೆರನಹಳ್ಳಿ ರಾಜು, ಜಿ. ಯಲ್ಲಪ್ಪ, ಐರಣಿ ಚಂದ್ರು, ಪಿ. ಷಣ್ಮುಖಸ್ವಾಮಿ, ಸರೋಜಾ, ರುದ್ರಮ್ಮ ಬೆಳಲಗೆರೆ, ಪುಷ್ಪ, ಎ. ತಿಪ್ಪೇಶ್, ಸುರೇಶ ಯರಗುಂಟೆ, ಬಿ. ಚಿನ್ನಪ್ಪ, ವಿ. ಲಕ್ಷ್ಮಣ ಇದ್ದರು.  
ದಾವಣಗೆರೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಭಾರತ ಕಮ್ಯುನಿಸ್ಟ್ ಪಕ್ಷದ ಪ್ರತಿಭಟನೆ
  • ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ
ದಾವಣಗೆರೆ : ನೀಟ್ ವ್ಯವಸ್ಥೆಗೆ ಬಲಿಯಾದ ವಿದ್ಯಾರ್ಥಿಗಳಿಗೆ ನ್ಯಾಯ ನೀಡಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ದೇಶದ ವಿದ್ಯಾರ್ಥಿ ಯುವಜನ ಸಂಘಟನೆಗಳು ಮತ್ತು ಸಿಜೆಪಿ ಕಾರ್ಯಕರ್ತರು ಚಳವಳಿ ನಿರತರಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಯುವಜನರ ಮೇಲೆ ದೆಹಲಿ ಪೊಲೀಸರು ಬರ್ಬರವಾಗಿ ದಾಳಿ ನಡೆಸಿರುವುದು ಖಂಡನೀಯ. ಇದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಮಂತ್ರಿ ಮತ್ತು ಕೇಂದ್ರ ಗೃಹ ಮಂತ್ರಿ ರಾಜೀನಾಮೆ ನೀಡಬೇಕೆಂದು ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಆವರಗೆರೆ ಚಂದ್ರು ಮತ್ತು ಎಚ್.ಜಿ. ಉಮೇಶ್ ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಕೆರನಹಳ್ಳಿ ರಾಜು, ಮುಖಂಡರಾದ ಜಿ. ಯಲ್ಲಪ್ಪ, ಐರಣಿ ಚಂದ್ರು, ಪಿ. ಷಣ್ಮುಖಸ್ವಾಮಿ, ಸರೋಜಾ, ರುದ್ರಮ್ಮ ಬೆಳಲಗೆರೆ, ಪುಷ್ಪ, ಎ. ತಿಪ್ಪೇಶ್, ಸುರೇಶ ಯರಗುಂಟೆ, ಬಿ. ಚಿನ್ನಪ್ಪ, ವಿ. ಲಕ್ಷ್ಮಣ, ರಮೇಶ್ ದಾಸರ್, ಮಾದಿಹಳ್ಳಿ ಮಂಜುನಾಥ, ಗೊಲ್ಲರಹಳ್ಳಿ ತಿಪ್ಪೇಸ್ವಾಮಿ, ಪಾಲವನಹಳ್ಳಿ ಪ್ರಸನ್ನ ಕುಮಾರ್, ಮೌನಾಚಾರಿ, ಶೇಖರನಾಯ್ಕ ಭಾಗವಹಿಸಿದ್ದರು.