ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಹಕಾರ ಸಪ್ತಾಹದ 5ನೇ ದಿನದ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಅವರು ಉದ್ಘಾಟಿಸಿದರು. ಜೆ.ಆರ್.ಷಣ್ಮುಖಪ್ಪ, ಸಿರಿಗೆರೆ ರಾಜಣ್ಣ, ಮಂಜುಳಾ ಗಣೇಶಪ್ಪ, ಜೆ.ಎಸ್.ವೇಣುಗೋಪಾಲ ರೆಡ್ಡಿ, ಕೆ.ಜಿ.ಸುರೇಶ್, ಬಿ.ಜಿ.ವೀರೇಶ್ ಇತರರಿದ್ದರು. 
ದಾವಣಗೆರೆ

ಸಹಕಾರ ಸಂಸ್ಥೆಗಳಿಗೆ ನಬಾರ್ಡ್ ಹಣ ಬಿಡುಗಡೆಗೆ ಕೇಂದ್ರ ಕ್ರಮ ವಹಿಸಲಿ

ಪ್ರಮುಖ ಮುಖ್ಯಾಂಶಗಳು

  • ಸಹಕಾರ ಸಪ್ತಾಹದಲ್ಲಿ ಶಾಸಕ ಬಸವಂತಪ್ಪ ಆಗ್ರಹ
  • ರಾಜ್ಯ ಸರ್ಕಾರ ವಿಶೇಷಾನುದಾನ ನೀಡಲಿ
  • ಸಹಕಾರ ಕ್ಷೇತ್ರಕ್ಕೆ ಯುವಜನರು ಬರಲಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರ ನೀಡುವ ಬಡ್ಡಿ ಸಹಾಯಧನ ಶೇ.3 ರಿಂದ 1.75ಕ್ಕೆ ಇಳಿಕೆಯಾಗಿದೆ. ಈ ಸಂಬಂಧ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸರ್ಕಾರದ ಗಮನ ಸೆಳೆದು ಪಿಎಸಿಎಸ್ ಕಾರ್ಯದರ್ಶಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು.