ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್ ಅವರು ಘೋಷಣೆ ಮೂಲಕ ಚಾಲನೆ ನೀಡಿದರು. ಎಸ್ಪಿ ಉಮಾ ಪ್ರಶಾಂತ್, ಪರಮೇಶ್ವರ್ ಹೆಗಡೆ ಇತರರಿದ್ದರು. 
ದಾವಣಗೆರೆ

ಜಿಲ್ಲೆಗಳಲ್ಲಿನ್ನು ಬಿಎಂಐ ತರಬೇತಿ- ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯಲ್ಲಿ ಪೊಲೀಸ್ ಕ್ರೀಡಾಕೂಟ ಶುರು
  • ಸುತ್ತೋಲೆಗಿಂತ ವೈಯಕ್ತಿಕ ಪರಿವರ್ತನೆ ಅಗತ್ಯ
  • ಕ್ರೀಡೆಗಳಿಗೆ ಹೊಸ ಮುಖಗಳು ಬರಲಿ
ದಾವಣಗೆರೆ: ಅಧಿಕ ದೇಹತೂಕವುಳ್ಳ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಮುನಿರಾಬಾದ್, ಬೆಳಗಾವಿಯ ವಿಶೇಷ ತರಬೇತಿ ಕೇಂದ್ರಗಳಲ್ಲಿ (ದೇಹದ ಗರಿಷ್ಠ ಸೂಚ್ಯಂಕ)ಬಿಎಂಐ ತರಬೇತಿ ನೀಡಲಾಗಿ 10ರಿಂದ 14 ಕೆಜಿಯಷ್ಟು ತೂಕ ಇಳಿಸುವ ಕೆಲಸ ಮಾಡಿದ್ದೇವೆ. ಇದನ್ನು ಎಲ್ಲ ಜಿಲ್ಲೆಗಳಲ್ಲೂ ಆರಂಭಿಸುವ ಚಿಂತನೆ ಇದೆ ಎಂದು ಕೆಎಸ್‌ಆರ್‌ಪಿ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್ ಹೇಳಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.