ದಾವಣಗೆರೆಯಲ್ಲಿ ಶುಕ್ರವಾರ, ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಜಯೋತ್ಸವ ಆಚರಿಸಿದರು. ಎಂ.ಪಿ. ರೇಣುಕಾಚಾರ್ಯ, ರಾಜಶೇಖರ್ ನಾಗಪ್ಪ, ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಬಸವರಾಜ ನಾಯ್ಕ, ಬಿ.ಜಿ. ಅಜಯ್ ಕುಮಾರ್, ಮಾಡಾಳು ಮಲ್ಲಿಕಾರ್ಜುನ್, ಧನಂಜಯ ಕಡಲೇಬಾಳ್, ಬಿ.ಎಂ. ಸತೀಶ್, ಚಂದ್ರಶೇಖರ್ ಪೂಜಾರ್, ಶ್ರೀನಿವಾಸ್ ಭಟ್, ಭಾಗ್ಯಾ ಪಿಸಾಳೆ, ನೀತು, ರೇಣುಕಮ್ಮ ಇದ್ದರು. 
ದಾವಣಗೆರೆ

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಗೆಲುವು
  • ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
  • ಕಾರ್ಯಕರ್ತರ ಹರ್ಷೋದ್ಗಾರ
ದಾವಣಗೆರೆ : ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.
ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು. ಆದಾಯದ ದೃಷ್ಟಿಯಿಂದ ದೇಶದ ದೊಡ್ಡ ಮಹಾನಗರ ಪಾಲಿಕೆ ಎನಿಸಿರುವ ಮುಂಬೈ ಗೆಲುವಿನ ಬಗ್ಗೆ ಹರ್ಷೋದ್ಗಾರ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮಾರ್ಗದರ್ಶನದಲ್ಲಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಅಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ ಎಂದರು.
ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅದೇ ಗತಿಯಾಗಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿ, ಮತಗಳ್ಳತನ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಂಬೈ ಫಲಿತಾಂಶ ಸೂಕ್ತ ಉತ್ತರವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಬಸವರಾಜ ನಾಯ್ಕ, ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಪಕ್ಷದ ಮುಖಂಡರಾದ ಬಿ.ಜಿ. ಅಜಯ್ ಕುಮಾರ್, ಮಾಡಾಳು ಮಲ್ಲಿಕಾರ್ಜುನ್, ಧನಂಜಯ ಕಡಲೇಬಾಳ್, ಅನಿಲ್ ಕುಮಾರ್ ನಾಯಕ್, ಬಿ.ಎಂ. ಸತೀಶ್, ಚಂದ್ರಶೇಖರ್ ಪೂಜಾರ್, ಶಿವಪ್ರಕಾಶ್, ವಿಶ್ವಾಸ್ ಎಚ್.ಪಿ, ಶ್ರೀನಿವಾಸ್ ಭಟ್, ತಾರೇಶ್ ನಾಯಕ್, ಮಂಜು, ಜಯಪ್ಪ, ಪ್ರವೀಣ, ಪಂಜು, ಬಾತಿ ಸಿದ್ದೇಶ್, ಮಹಿಳಾ ಮೋರ್ಚಾ ಸದಸ್ಯರಾದ ಭಾಗ್ಯಾ ಪಿಸಾಳೆ, ನೀತು, ರೇಣುಕಮ್ಮ, ಮಂಜುಳಾ ಇಟಗಿ, ಗೀತಾ, ಕಮಲಾ ಪಾಲ್ಗೊಂಡಿದ್ದರು.