ಬಸವಾಪಟ್ಟಣದ ಹೋಟೆಲ್‌ನಲ್ಲಿ ಆರ್‌ಸಿಬಿ ಗೆಲುವಿನ ಸಂತಸಕ್ಕೆ ಉಚಿತ ಬಿರಿಯಾನಿ ಪಡೆಯಲು ನೆರೆದಿದ್ದ ಅಭಿಮಾನಿಗಳು. IPL 
ದಾವಣಗೆರೆ

ಆರ್‌ಸಿಬಿ ಜಯದ ಸಂತಸಕ್ಕೆ ಬಿರಿಯಾನಿ ವಿತರಣೆ IPL

ಪ್ರಮುಖ ಮುಖ್ಯಾಂಶಗಳು

  • ಬಸವಾಪಟ್ಟಣದ ಹೋಟೆಲ್ ಕೊಡುಗೆ
  • ನೂರಾರು ಅಭಿಮಾನಿಗಳು ಭಾಗಿ
ಬಸವಾಪಟ್ಟಣ: ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿ ಸತತ 2ನೇ ಬಾರಿ ಚಾಂಪಿಯನ್ ಆದ ಸಂತಸಕ್ಕೆ ಬಸವಾಪಟ್ಟಣದ ಹೋಟೆಲ್ ಮಾಲೀಕ ಮನು ಎಂಬುವವರು ಸೋಮವಾರ 35 ಕೆಜಿ ಬಿರಿಯಾನಿಯನ್ನು ಉಚಿತವಾಗಿ ಜನರಿಗೆ ಹಂಚಿದ್ದಾರೆ. IPL
ಸುದ್ದಿ ತಿಳಿಯುತ್ತಿದ್ದಂತೆಯೇ ಬಸವಾಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ನೂರಾರು ಕ್ರಿಕೆಟ್ ಅಭಿಮಾನಿಗಳು ಹೋಟೆಲ್ ಬಳಿ ಸೇರಿ ಉಚಿತ ಬಿರಿಯಾನಿ ಸವಿದರು.
ಈ ಸಂದರ್ಭದಲ್ಲಿ ಮನು ಮಾತನಾಡಿ, ಆರ್‌ಸಿಬಿ ತಂಡದ ಗೆಲುವು ಕರ್ನಾಟಕದ ಕೋಟ್ಯಂತರ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಸಂತೋಷವನ್ನು ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶ ನನ್ನದು. ಅಭಿಮಾನಿಗಳ ಪ್ರೋತ್ಸಾಹವೇ ನಮಗೆ ಸ್ಫೂರ್ತಿ ಎಂದು ತಿಳಿಸಿದರು.
ಈ ವೇಳೆ ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಹಲವರು ತಂಡದ ಧ್ವಜಗಳನ್ನು ಪ್ರದರ್ಶಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕಾರ್ಯಕ್ರಮವು ಹಬ್ಬದ ವಾತಾವರಣ ಸೃಷ್ಟಿಸಿತ್ತು.