ದಾವಣಗೆರೆಯಲ್ಲಿ ಸೋಮವಾರ, ಚಾಡ್ ದೇಶದಿಂದ ಸುರಕ್ಷಿತವಾಗಿ ಮರಳಿದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾದರು. 
ದಾವಣಗೆರೆ

ಸಂಸದೆ ಭೇಟಿಯಾದ ಹಕ್ಕಿಪಿಕ್ಕಿಗಳು

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಚಾಡ್ ದೇಶದಿಂದ ಸುರಕ್ಷಿತವಾಗಿ ತಾಯ್ನಡಿಗೆ
  • ಸಹಕಾರಕ್ಕಾಗಿ ಧನ್ಯವಾದ ಸಲ್ಲಿಕೆ
ದಾವಣಗೆರೆ : ಆಫ್ರಿಕದ ಚಾಡ್ ದೇಶದಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸೋಮವಾರ ಭೇಟಿಯಾದರು.
ಗಿಡಮೂಲಿಕೆಗಳ ವ್ಯಾಪಾರದ ಉದ್ದೇಶದಿಂದ ಚಾಡ್ ದೇಶಕ್ಕೆ ತೆರಳಿದ್ದ ಈ ಎಂಟು ಮಂದಿ, ವೀಸಾ ಸಂಬಂಧಿತ ಸಮಸ್ಯೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ಈ ವಿಷಯ ತಿಳಿದ ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಬಂಧಿತ ಅಧಿಕಾರಿಗಳೊಂದಿಗೆ ತ್ವರಿತ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡ ಪರಿಣಾಮ ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತಾಯಿತು.
ಸಂಸದೆ ನಿವಾಸಕ್ಕೆ ಆಗಮಿಸಿದ ಹಕ್ಕಿಪಿಕ್ಕಿ ಸಮುದಾಯದ ಸದಸ್ಯರು ಸಹಕಾರಕ್ಕಾಗಿ ಸಂತಸ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದರು.