ಜಗಳೂರಿನಲ್ಲಿ ಆಯೋಜಿಸಿದ್ದ ಸುದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿದರು. ಗೋಡೆ ಸಿದ್ದೇಶ್, ಉಸ್ಮಾನ್, ಯಲ್ಲಪ್ಪ ಮಾಸ್ಟರ್, ಸಣ್ಣ ತಿಪ್ಪೇಶಿ ಇತರರಿದ್ದರು. farmer 
ದಾವಣಗೆರೆ

ಸರ್ಕಾರದ ನಿರ್ಲಕ್ಷೃದಿಂದ ಭದ್ರಾ ಮೇಲ್ದಂಡೆ ಯೋಜನೆ ನನೆಗುದಿಗೆ farmer

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್ ಆರೋಪ
  • ರೈತರು ಒಟ್ಟಾಗಿ ಹೋರಾಟಕ್ಕೆ ಅಣಿಯಾಗುವಂತೆ ಮನವಿ
ಜಗಳೂರು: ಸರ್ಕಾರದ ನಿರ್ಲಕ್ಷೃದಿಂದ ಭದ್ರಾ ಮೇಲ್ದಂಡೆ ಯೋಜನೆ ನನೆಗುದಿಗೆ ಬಿದ್ದಿದೆ. ಹೋರಾಟಗಾರರು, ರೈತರು ಒಟ್ಟಾಗಿ ಹೋರಾಟ ಮಾಡದಿದ್ದರೆ ಯೋಜನೆ ಕೈ ತಪ್ಪುವ ಸಾಧ್ಯತೆ ಇದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇರುದ್ರೇಶ್ ಎಚ್ಚರಿಸಿದರು. farmer
ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾತಿ ಗೆ ನಡೆದ ಹೋರಾಟ ಹಾಗೂ ಪ್ರಸ್ತುತ ಎದುರಾಗಿರುವ ಅನುದಾನದ ಕೊರತೆ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಕಾಲದಲ್ಲೇ ಈ ಯೋಜನೆಯಡಿ ಜಗಳೂರು ತಾಲೂಕು ಸೇರಿತ್ತು. ನಂತರದ ದಿನಗಳಲ್ಲಿ ಜನನಾಯಕರ ನಿರ್ಲಕ್ಷ್ಯದಿಂದ ಹೆಸರು ಕೈಬಿಡಲಾಗಿತ್ತು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿ ಸಿಎಂ ಆದಾಗ ಈ ಯೋಜನೆಗೆ ಮರುಜೀವ ನೀಡಿದರು. ತದನಂತರ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜಗಳೂರನ್ನು ಸೇರಿಸಲು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಕುಮಾರಸ್ವಾಮಿ 2ನೇ ಬಾರಿ ಸಿಎಂ ಆಗಿದ್ದಾಗ ತಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ಜಗಳೂರು ತಾಲೂಕಿಗೆ 2.4 ಟಿಎಂಸಿ ಅಡಿ ನೀರನ್ನು ಮಂಜೂರು ಮಾಡಿದರು ಎಂದು ಸ್ಮರಿಸಿದರು.
ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ ಹಾಗೂ ಬಸವರಾಜ ಬೊಮ್ಮಾಯಿ ಜಲ ಸಂಪನ್ಮೂಲ ಸಚಿವರಾದಾಗ ತಾಂತ್ರಿಕ ಪ್ರಕ್ರಿಯೆ ಮುಗಿದು ನೀರಿನ ಹಂಚಿಕೆ ಅಧಿಕೃತಗೊಂಡಿತು ಎಂದು ಅವರು ವಿವರಿಸಿದರು. ಯೋಜನೆಯ ಡಿಪಿಆರ್ ಪ್ರಕಾರ ತಾಲೂಕಿನ 9 ಪ್ರಮುಖ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಆದರೆ ಪ್ರಸ್ತುತ ಪೈಪ್‌ಲೈನ್ ಅಳವಡಿಕೆಗೆ ತಾಂತ್ರಿಕ ಅಡಚಣೆ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಗೊಂದಲದ ಬಗ್ಗೆ ಜಿಲ್ಲಾಧಿಕಾರಿ ಅಥವಾ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಾಗಲಿ ತಕ್ಷಣವೇ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸ್ಪಷ್ಟನೆ ನೀಡಬೇಕು ಎಂದು ಕಲ್ಲೇರುದ್ರೇಶ್‌ಒತ್ತಾಯಿಸಿದರು.
ಡಿಸೆಂಬರ್‌ನಲ್ಲಿ ಚಿತ್ರದುರ್ಗಕ್ಕೆ ನೀರು ಬರಲಿದೆ. ಈ ವರ್ಷ ತುಂಗಭದ್ರಾದಿಂದ ಭದ್ರಾ ಮೇಲ್ದಂಡೆಗೆ ನೀರು ಎತ್ತಲಾಗುತ್ತಿದೆ. ಈಗ ಎಲ್ಲರೂ ಒಟ್ಟಾಗಿ, ಇಲ್ಲವಾದಲ್ಲಿ ಜಗಳೂರಿಗೆ ನೀರು ಬರಲು ಇನ್ನು ಎಷ್ಟು ದಶಕಗಳು ಬೇಕಾಗುತ್ತವೆಯೋ ತಿಳಿಯದು ಎಂದರು. ಗೋಡೆ ಸಿದ್ದೇಶ್, ಉಸ್ಮಾನ್, ಯಲ್ಲಪ್ಪ ಮಾಸ್ತರ್, ಸಣ್ಣ ತಿಪ್ಪೇಶಿ, ಲಕ್ಷ್ಮಣ್, ಬನ್ನಿಹಟ್ಟಿ ರೇವಣ್ಣ, ತೋರಣಗಟ್ಟೆ ಬಾಲಪ್ಪ, ಲಿಂಗಪ್ಪ ಇತರರಿದ್ದರು.
ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ: 2020ರಲ್ಲಿ ಈ ಯೋಜನೆಗೆ 1200 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆದರೆ ರಾಜಕಾರಣಿಗಳ ನಿರ್ಲಕ್ಷ್ಯದಿಂದ ವರ್ಷಗಳು ಉರುಳಿದವು. ಈಗ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ.ಯೋಜನಾ ವೆಚ್ಚ 1800 ಕೋಟಿ ರೂ. ಗೆ ಏರಿಕೆಯಾಗಿದೆ. ಪರಿಸ್ಥಿತಿ ಹೀಗಿದ್ದರೂ, ಕಳೆದ 2-3 ವರ್ಷಗಳಲ್ಲಿ ಸರ್ಕಾರ ನೀಡಿರುವುದು ಕೇವಲ 10-15 ಕೋಟಿ ರೂ. ಮಾತ್ರ. ಹೀಗಾದರೆ ಕಾಮಗಾರಿ ಹೇಗೆ ಪೂರ್ಣಗೊಳ್ಳಬೇಕು ಎಂದು ಕಲ್ಲೇರುದ್ರೇಶ್ ಆಕ್ರೋಶ ಹೊರ ಹಾಕಿದರು.