ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಬಿಎಲ್‌ಎ-2ಗಳ ಕಾರ್ಯಾಗಾರವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಎಚ್.ಬಿ. ಮಂಜಪ್ಪ, ಡಿ. ಬಸವರಾಜು, ಡಾ. ಅರವಿಂದ್, ಬಿ. ಸಿದ್ದಪ್ಪ, ಗಿರೀಶ್ ಇತರರಿದ್ದರು. SIR
- ಶಾಸಕ ಡಿ.ಜಿ. ಶಾಂತನಗೌಡ ಹೇಳಿಕೆ
- ಹಿರೇಕಲ್ಮಠದಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್‌ಎ-2 ಗಳ ವಿಶೇಷ ತರಬೇತಿ ಕಾರ್ಯಾಗಾರ
ಹೊನ್ನಾಳಿ: ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಂತಹವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು. ಎಸ್‌ಐಆರ್ ಸಿಬ್ಬಂದಿ ಮನೆಗೆ ಬಂದಾಗ ಅವರಿಂದ ಎನ್ಯುಮರೇಷನ್ ಅರ್ಜಿ ಪಡೆದು, ತಮ್ಮ ಕುಟುಂಬದ ಎಲ್ಲ ಸದಸ್ಯರ ವಿವರಗಳನ್ನು ಭರ್ತಿ ಮಾಡಿಕೊಡಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಮನವಿ ಮಾಡಿದರು. SIR
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ಹೊನ್ನಾಳಿ ವಿಧಾನಸಭಾ ಕ್ಷೇತ್ರ-110ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಿಎಲ್‌ಎ-2 ಗಳ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಎಸ್‌ಐಆರ್ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಸಾಗುತ್ತಿದೆ. ಮತದಾರರ ವಿಶೇಷ ಪರಿಷ್ಕರಣೆಗೆ ನಿಯೋಜನೆಗೊಂಡಿರುವ ಬಿಎಲ್‌ಒಗಳ ಜತೆಯಲ್ಲಿ ನಮ್ಮ ಪಕ್ಷದ ಬಿಎಲ್‌ಎ-2 ಕಾರ್ಯಕರ್ತರು ಸಹ ಮನೆ ಮನೆಗೆ ಭೇಟಿ ನೀಡಬೇಕು. ಯಾರೂ ಕೂಡ ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಡಿ. ಬಸವರಾಜ್ ಮಾತನಾಡಿ, ಕೇಂದ್ರದ ತಪ್ಪು ನೀತಿಗಳಿಂದಾಗಿ ದೇಶದ 13 ರಾಜ್ಯಗಳಲ್ಲಿ ಸುಮಾರು 6.5 ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಇನ್ನುಳಿದ 17 ರಾಜ್ಯಗಳಲ್ಲಿ ಇನ್ನೆಷ್ಟು ಮತದಾರರು ಹಕ್ಕು ಕಳೆದುಕೊಳ್ಳಲಿದ್ದಾರೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಅರವಿಂದ್ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಕೈಬಿಡಲು ಹಾಗೂ ತಿದ್ದುಪಡಿ ಮಾಡಲು ಹೀಗೆ ಪ್ರತಿಯೊಂದು ಉದ್ದೇಶಕ್ಕೂ ಪ್ರತ್ಯೇಕ ಫಾರ್ಮ್‌ಗಳಿವೆ. ನಿಮ್ಮ ಬಳಿ ಬರುವ ಬಿಎಲ್‌ಒಗಳಿಂದ ಸಂಬಂಧಿಸಿದ ಫಾರ್ಮ್‌ಗಳನ್ನು ಪಡೆದು ಸರಿಯಾದ ಮಾಹಿತಿ ಭರ್ತಿ ಮಾಡಿಕೊಡಬೇಕು ಎಂದರು.
ಎಸ್‌ಐಆರ್ ಕಾರ್ಯಕ್ರಮಕ್ಕೆ ಸ್ಪಂದಿಸಿ: ಮತದಾರರ ವಿಶೇಷ ಪರಿಷ್ಕರಣೆ ಕುರಿತು ವಿಪಕ್ಷದವರು ಮಾಡುವ ಟೀಕೆಗಳಿಗೆ ಕಿವಿಕೊಡಬಾರದು. ಪ್ರತಿಯೊಬ್ಬ ಮತದಾರನೂ ಇದನ್ನು ತನ್ನ ಜವಾಬ್ದಾರಿ ಎಂದು ಅರಿತು, ಎಸ್‌ಐಆರ್ ಕಾರ್ಯಕ್ರಮಕ್ಕೆ ಸ್ಪಂದಿಸಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ. ಸಿದ್ದಪ್ಪ, ಗಿರೀಶ್, ತಾಲೂಕಾಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಎಚ್.ಬಿ. ಶಿವಯೋಗಿ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎ. ಗದ್ದಿಗೇಶ್ ಹಾಗೂ ಶಿವರಾಂ ನಾಯ್ಕ, ಸದಸ್ಯರಾದ ಸಾಸ್ವೇಹಳ್ಳಿ ಕೃಷ್ಣಮೂರ್ತಿ, ಆಶಾ, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪ ರವೀಶ್, ಕೆಪಿಸಿಸಿ ಸದಸ್ಯ ಡಾ. ಈಶ್ವರ್ ನಾಯ್ಕ, ಯುವ ಮುಖಂಡ ಮಧುಗೌಡ ಇದ್ದರು.