ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಪೊನ್ನಂಪೇಟೆ ಕೃಷಿ ವಿವಿಯ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ಆರ್.ಎನ್. ಕೆಂಚರೆಡ್ಡಿ ಉದ್ಘಾಟಿಸಿದರು. ಡಾ.ಬಿ.ಎಂ. ಆನಂದಕುಮಾರ್, ಡಾ. ಗಂಗಪ್ಪಗೌಡ ಬಿರಾದಾರ, ಡಾ. ಸಣ್ಣತಿಮ್ಮಪ್ಪ, ಡಾ. ಮಂಜುನಾಥ್, ಡಾ. ಶರಣಪ್ಪ, ಡಾ.ಪ್ರಕಾಶ್, ಡಾ.ಎಸ್.ಬಿ. ಸಾಲಿಮಠ್ ಇದ್ದರು.training 
ದಾವಣಗೆರೆ

ಜೇನು ಸಾಕಣೆ ಕೃಷಿ ಇಳುವರಿಗೂ ತರಲಿದೆ ತುಪ್ಪ Beekeeping

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಡಾ.ಆರ್.ಎನ್. ಕೆಂಚರೆಡ್ಡಿ ಹೇಳಿಕೆ
  • ಚನ್ನಗಿರಿಯಲ್ಲಿ ತರಬೇತಿ ಕಾರ್ಯಕ್ರಮ
ಚನ್ನಗಿರಿ: ಜೇನು ನೊಣಗಳು ಪರಾಗಸ್ಪರ್ಶದ ಮೂಲಕ ಮಕರಂದ ತಯಾರಿಸುವುದರಿಂದ ಶೇ.30 ರಷ್ಟು ಹೆಚ್ಚುವರಿ ಇಳುವರಿ ಲಭ್ಯವಾಗುತ್ತದೆ ಎಂದು ಪೊನ್ನಂಪೇಟೆ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ಆರ್.ಎನ್. ಕೆಂಚರೆಡ್ಡಿ ತಿಳಿಸಿದರು.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ-ತೋಟಗಾರಿಕೆ ವಿವಿಯ ಕತ್ತಲಗೆರೆ ವಿಸ್ತರಣಾ ಶಿಕ್ಷಣ ಘಟಕ, ದಾವಣಗೆರೆ ಕೃಷಿ ಇಲಾಖೆ ಸಹಯೋಗದಡಿ ಕತ್ತಲಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಜೇನು ಕೃಷಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಮಳೆ ಪ್ರಮಾಣ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ರೈತರು ಏಕ ಬೆಳೆ ಪದ್ಧತಿ ಬಿಟ್ಟು ಬಹು ವಾರ್ಷಿಕ ಹಣ್ಣು, ತರಕಾರಿ, ಪುಷ್ಪ ಬೇಸಾಯದ ಕಡೆ ಗಮನ ಹರಿಸಿದಾಗ ಕಡಿಮೆ ವೆಚ್ಚದಲ್ಲಿ ಜೇನು ಕೃಷಿ ಕೈಗೊಳ್ಳಬಹುದು ಎಂದರು.
ಉಪಕಸುಬಾಗಿ ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು. ಜೇನು ಸಾಕಣೆಯಿಂದ ಕೃಷಿ ಬೆಳೆಗಳ ಉತ್ಪಾದನೆ ಕೂಡ ಶೇ.20 ರಷ್ಟು ಹೆಚ್ಚಳವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜೇನು ಸಂತತಿ ಕಾಪಾಡಲು ಪರಿಸರ ಸ್ನೇಹಿ ಪೀಡೆಗಳ ನಿರ್ವಹಣಾ ಕ್ರಮ ಅಳವಡಿಸಿಕೊಳ್ಳಬೇಕು. ಆಸಕ್ತರಿಗೆ ಕರ್ನಾಟಕ ತೋಟಗಾರಿಕೆ ಮತ್ತು ಇತರ ಸಂಸ್ಥೆಗಳು ಸಾಕಣೆ ವಿಧಾನ, ನಿರ್ವಹಣೆ, ಸಂಗ್ರಹಣೆ, ಮಾರಾಟ, ಪರಾಗಸ್ಪರ್ಶದ ಲಾ ಕುರಿತು ತಜ್ಞರಿಂದ ತರಬೇತಿ ನೀಡುತ್ತವೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಸಂಸ್ಕರಣಾ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಂ. ಆನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಗಂಗಪ್ಪಗೌಡ ಬಿರಾದಾರ, ಡಾ. ಸಣ್ಣತಿಮ್ಮಪ್ಪ, ಡಾ. ಮಂಜುನಾಥ್, ಡಾ. ಶರಣಪ್ಪ, ಡಾ. ಪ್ರಕಾಶ್, ಡಾ.ಎಸ್.ಬಿ. ಸಾಲಿಮಠ್ ಇದ್ದರು.