ಚನ್ನಗಿರಿ ತಾಲೂಕು ವಾಚನಾಯಕನಹಳ್ಳಿಯಲ್ಲಿ ಶುಕ್ರವಾರ ನೂತನ ಬಸವಣ್ಣ ಪುತ್ಥಳಿ ಅನಾವರಣಗೊಳಿಸಲಾಯಿತು. ಪಾಂಡೋಮಟ್ಟಿಯ ಡಾ. ಶ್ರೀ ಗುರುಬಸವ ಸ್ವಾಮೀಜಿ, ಮುಖ್ಯಶಿಕ್ಷಕ ಸಿ.ಎಸ್. ನಿಜಲಿಂಗಪ್ಪ, ಸಹ ಶಿಕ್ಷಕರಾದ ಕೆ.ಎಲ್. ಲಿಂಗರಾಜ್, ಬಿ.ಆರ್. ರವಿ, ಜಿಕ್ರಿಯಾ, ಮಣಿಕುವಾರ್, ನಾಗರಾಜ್, ಯಶವಂತ್ ಇತರರು ಇದ್ದರು. Principles 
ದಾವಣಗೆರೆ

ಬಸವಣ್ಣನ ತತ್ವಗಳು ವಿಶ್ವವ್ಯಾಪಿ Principles

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಪಾಂಡೋಮಟ್ಟಿ ಡಾ.ಶ್ರೀ ಗುರುಬಸವ ಸ್ವಾಮೀಜಿ ಹೇಳಿಕೆ
ಚನ್ನಗಿರಿ: ಬಸವಣ್ಣನ ತತ್ವಗಳು ವಿಶ್ವವ್ಯಾಪಿ ಪಸರಿಸಿದೆ ಎಂಬುದಕ್ಕೆ ಇಂಗ್ಲೆಂಡ್‌ನ ಪಾರ್ಲಿಮೆಂಟ್ ಮುಂದಿರುವ ಬಸವಣ್ಣನ ಪುತ್ಥಳಿಯೇ ಸಾಕ್ಷಿ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು. Principles
ತಾಲೂಕು ವಾಚನಾಯಕನಹಳ್ಳಿ ವ್ಯಾಪ್ತಿಯ ಶ್ರೀ ಬಸವ ವಿದ್ಯಾಪೀಠ ಪಾಂಡೋ ಮಟ್ಟಿ ಹಾಗೂ ಶ್ರೀ ಬಸವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಬಸವಣ್ಣ ನೂತನ ಪುತ್ಥಳಿ ಅನಾವರಣ ಮತ್ತು ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿ ವಾತನಾಡಿದರು.
ಬಸವಣ್ಣನ ತತ್ವ, ಆದರ್ಶಗಳು ಸವಾಜ ದಲ್ಲಿ ಸವಾನತೆ ಸಾರುತ್ತಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ 12ನೇ ಶತಮಾನ ಮರುಕಳಿಸಲಿದೆ. ಬಸವಣ್ಣ ವ್ಯಕ್ತಿಯಲ್ಲ, ಶಕ್ತಿ. ಪ್ರತಿಯೊಂದು ವಿಚಾರಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಧಾರ್ಮಿಕ ಕ್ರಾಂತಿ ನಡೆಸಿದರು. ಸವಾಜದ ಸುಧಾರಕರಾಗಿ, ತತ್ವಜ್ಞಾನಿಯಾಗಿ ಮತ್ತು ಶ್ರೇಷ್ಠ ವಚನಗಾರರಾಗಿದ್ದಾರೆ. ಅವರ ವಿಚಾರ ಧಾರೆಗಳು ಅಜರಾಮರ ಎಂದು ತಿಳಿಸಿದರು.
ಜಾತಿ ವ್ಯವಸ್ಥೆ ಮೇಲೆ ಹೋರಾಡಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾದರು. ದುಡಿಯುವುದರಲ್ಲಿ ಹಂಚಿ ತಿನ್ನಬೇಕೆಂಬ ದಾಸೋಹ ತತ್ವ ತಂದರು. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಸೀ ಸಮಾನತೆಗೆ ಆದ್ಯತೆ ನೀಡಿದರು ಎಂದು ತಿಳಿಸಿದರು.
ಶಿಕ್ಷಕರು ಪಠ್ಯದ ಜತೆ ಶಿಸ್ತು, ಸಮಯ ಪಾಲನೆ ಹೇಳಿಕೊಡಬೇಕು. ಶಿಕ್ಷಕರ ಮನದಲ್ಲಿ ನಮ್ಮ ಮಕ್ಕಳು, ನಮ್ಮ ಶಾಲೆ ಎಂಬ ಪ್ರೀತಿ, ಅಭಿವಾನ ಇರಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಸಿ.ಎಸ್. ನಿಜಲಿಂಗಪ್ಪ, ಸಹ ಶಿಕ್ಷಕರಾದ ಕೆ.ಎಲ್. ಲಿಂಗರಾಜ್, ಬಿ.ಆರ್. ರವಿ, ಜಿಕ್ರಿಯಾ, ಮಣಿಕುವಾರ್, ನಾಗರಾಜ್, ಯಶವಂತ್, ಬಿ. ಸೌಮ್ಯ, ಎಂ.ಸಿ. ಸೌಮ್ಯ ಇತರರು ಇದ್ದರು.