ನ್ಯಾಮತಿಯಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ವಿಶ್ವರಾಧ್ಯ ಶಾಸ್ತ್ರಿ, ಹೊಸಮನೆ ಕುಂಬಾರ ಶಂಕರಪ್ಪ, ಹೊಸಮನೆ ಕುಂಬಾರ ಮಲ್ಲಿಕಾರ್ಜುನ್ ಎಚ್.ಕೆ. ಚನ್ನೇಶಪ್ಪ ಇತರರಿದ್ದರು. 
ದಾವಣಗೆರೆ

ಪುಣ್ಯಕ್ಷೇತ್ರಗಳ ಪ್ರವಾಸದಿಂದ ಜಂಜಾಟ ದೂರ

ಪ್ರಮುಖ ಮುಖ್ಯಾಂಶಗಳು

  • ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
  • ಧರ್ಮ ಸಂದೇಶ ಸಮಾರಂಭ, ಧರ್ಮಸಭೆ
  • ವಾರ್ಷಿ ಕೋತ್ಸವ ಮತ್ತು ಕಾರ್ತಿಕೋತ್ಸವ
ನ್ಯಾಮತಿ: ಮಠ, ಮಂದಿರ, ಪುಣ್ಯಕ್ಷೇತ್ರಗಳ ಭೇಟಿಯಿಂದ ಜೀವನ ಜಂಜಾಟದಿಂದ ಹೊರಬರಬಹುದು ಎಂದು ಹೊನ್ನಾಳಿ ಹೀರೆಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕುಂಬಾರ ಬೀದಿಯ ಅಮ್ಮನಮರದ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ 23ನೇ ವರ್ಷದ ವಾರ್ಷಿ ಕೋತ್ಸವ ಮತ್ತು ಕಾರ್ತಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ, ಧರ್ಮ ಸಂದೇಶ ಸಮಾರಂಭ, ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಸಾರಿಕ ಜೀವನದಲ್ಲಿ ಒತ್ತಡಗಳು ಸಾಮಾನ್ಯ. ಶರಣರು ಸಂಸಾರದಲ್ಲಿದ್ದುಕೊಂಡೇ ಸಾಧನೆಗೈದಿರುವ ಉದಾಹರಣೆಗಳು ಸಾಕಷ್ಟಿವೆ. ಅವುಗಳನ್ನು ನಿವಾರಿಸಿಕೊಂಡು ಬದುಕಿನ ದಾರಿಯನ್ನು ಸುಲಭ ಮಾಡಿಕೊಳ್ಳೋಣ ಎಂದರು. ಪೌರೋಹಿತ್ಯವನ್ನು ಕೋಹಳ್ಳಿ ಮಠದ ವಿಶ್ವರಾಧ್ಯ ಶಾಸ್ತ್ರಿ ನೆರವೇರಿಸಿದರು. ದೇವಸ್ಥಾನದ ಟ್ರಸ್ಟಿ ಹೊಸಮನೆ ಕುಂಬಾರ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಅಂತರ್ಜಲ ಸಂಶೋಧಕ ಕಂಕನಹಳ್ಳಿ ಕೆ.ಜಿ. ಚಂದ್ರಶೇಖರಪ್ಪ, ವಿನಾಯಕ ಬಳಗದ ಯುವಕರು, ವೀರಗಾಸೆ ಮತ್ತು  ಲಲಿತಾ ಸಹಸ್ರ ನಾಮಾವಳಿ ತಂಡದವರನ್ನು ಸನ್ಮಾನಿಸಲಾಯಿತು. ದೇಗುಲ ಟ್ರಸ್ಟ್‌ನ ಸಹ ಕಾರ್ಯದರ್ಶಿ ಹೊಸಮನೆ ಕುಂಬಾರ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಚ್.ಕೆ.  ಚನ್ನೇಶಪ್ಪ, ವಾಗೀಶ್ ನುಚ್ಚಿನ್, ಉಪನ್ಯಾಸಕ ಪ್ರವೀಣಕುಮಾರ್ ಮಾತನಾಡಿದರು. ಧರ್ಮ ಸಭೆ ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಖಜಾಂಚಿ ಎನ್.ಎಂ. ಮಲ್ಲೇಶಪ್ಪ, ಚೀಲೂರು ಪುಟ್ಟಪ್ಪ, ಮಲ್ಲಿಕಾರ್ಜುನಪ್ಪ ಜಿನಕೇರಿ, ಚನ್ನಬಸಪ್ಪ, ಸಿದ್ದಪ್ಪ, ರೇಣುಕಪ್ಪ, ಕರಿಬಸಪ್ಪ ಇತರರು ಇದ್ದರು.