ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ‘ತಲ್ಲಣಿಸದಿರು ಮನವೇ’ ಚಿಂತನಾ ಗೋಷ್ಠಿಯನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಉದ್ಘಾಟಿಸಿದರು. ಸಾಣೇಹಳ್ಳಿ ಪೀಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಬಂಜಗೆರೆ ಜಯಪ್ರಕಾಶ್, ರಾಮಲಿಂಗಪ್ಪ ಟಿ. ಬೇಗೂರು, ಮಂಜಪ್ಪ ಮಾಗೋದಿ, ಶಿವಾನಂದ ದಳವಾಯಿ ಇದ್ದರು. 
ದಾವಣಗೆರೆ

ಸಂವಿಧಾನ ಅಪಚಾರ ವಿರುದ್ಧದ ಧ್ವನಿಯಾಗಿ- ಡಾ.ಪಂಡಿತಾರಾಧ್ಯ ಸ್ವಾಮೀಜಿ

ಪ್ರಮುಖ ಮುಖ್ಯಾಂಶಗಳು

  • ತಲ್ಲಣಿಸದಿರು ಮನವೇ ಚಿಂತನಾ ಗೋಷ್ಠಿ
  • ಎಚ್ಚರಿಕೆಯಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ
  • ಮನೆ, ಮಠ, ಸಮಾಜದಿಂದ ಸಾಂಸ್ಕೃತಿಕ ಬಹುತ್ವ ಉಳಿವು
ದಾವಣಗೆರೆ: ಸಂವಿಧಾನದ ಅಪಚಾರ ಮಾಡುವವರ ವಿರುದ್ಧ ಪ್ರತಿಭಟಿಸುವ ಮನೋಭಾವ ರೂಢಿಸಿಕೊಂಡಾಗ ಸಾಂಸೃತಿಕ ಬಹುತ್ವ ಮತ್ತು ಸಂವಿಧಾನ ರಕ್ಷಣೆ ಸಾಧ್ಯವಿದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ,‘ತಲ್ಲಣಿಸದಿರು ಮನವೇ’ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಿಂದು ರಾಷ್ಟ್ರ ಸ್ಥಾಪಿಸುವ ಬಗ್ಗೆ ಮಾತಾಡುವವರು ಹಿಂದು ಪದದ ಉತ್ಪತ್ತಿ ಪುರಾಣ ಅಥವಾ ಭಗವದ್ಗೀತೆಯಿಂದ ಬಂದಿದೆಯೇ ಎಂಬುದನ್ನು ಸ್ಪಷ್ಟಪಡಿಸಲಿ. ಜಾತಿ ಶ್ರೇಷ್ಠತೆಯ ಮನುಧರ್ಮಶಾಸ್ತ್ರದ ಕಸ ಇಂದು ಉಪನ್ಯಾಸಕ ವರ್ಗದಿಂದ ಹಿಡಿದು ನ್ಯಾಯಾಧೀಶರ ತಲೆಯಲ್ಲೂ ಬೇರೂರಿದೆ.