ಹೆಚ್ಚುವರಿ ಬಸ್ ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಕೋಟೆಹಾಳ್ ಗ್ರಾಮದಲ್ಲಿ ಸ್ಥಳೀಯರು ಬಸ್ಸಿಗೆ ಪೂಜೆ ಸಲ್ಲಿಸಿದರು. ಮಾರುತಿ ಕೆ.ಎನ್, ಮಾಜಿ ಗ್ರಾಪಂ ಅಧ್ಯಕ್ಷ ತಿಪ್ಪೇಶ್ ಎಂ.ಎಚ್, ರವಿಕುಮಾರ್, ಮಹಾಬಲೇಶ್, ಚಂದ್ರಶೇಖರ್, ರಾಜಪ್ಪ, ಸಂತೋಷ್ ಇತರರಿದ್ದರು. Bus 
ದಾವಣಗೆರೆ

ಹೊನ್ನಾಳಿ-ದಾವಣಗೆರೆ ಮಧ್ಯೆ ಶುರುವಾಯ್ತು ಹೆಚ್ಚುವರಿ ಬಸ್ ಸಂಚಾರ Bus

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ
  • ಕೋಟೆಹಾಳ್ ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ
ಬಸವಾಪಟ್ಟಣ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೆಚ್ಚುವರಿ ಬಸ್ ಸೌಕರ್ಯದ ಮನವಿಗೆ ಸ್ಪಂದಿಸಿರುವ ಕೆಎಸ್‌ಆರ್‌ಟಿಸಿ ಹೊನ್ನಾಳಿ- ದಾವಣಗೆರೆ ಮಾರ್ಗದಲ್ಲಿ ಹೊಸದಾಗಿ ಹೆಚ್ಚುವರಿ ಬಸ್ ಸೇವೆಯನ್ನು ಸೋಮವಾರದಿಂದ ಆರಂಭಿಸಿದೆ. ಗ್ರಾಮಕ್ಕೆ ಬಂದ ಬಸ್ಸಿಗೆ ಸ್ಥಳೀಯರು ಪೂಜೆ ಸಲ್ಲಿಸಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. Bus
ಹೊನ್ನಾಳಿ, ದಾಗಿನಕಟ್ಟೆ, ಬಸವಾಪಟ್ಟಣ, ಕುಂದೂರು, ಕಾರಿಗನೂರು ಕ್ರಾಸ್, ಹದಡಿ, ದಾವಣಗೆರೆ ಮಾರ್ಗದಲ್ಲಿ ಈಗಾಗಲೇ 2 ಸರ್ಕಾರಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ನಗರ ಪ್ರದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ, ನೌಕರರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಇದರಿಂದಾಗಿ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾರುತಿ ಕೆ.ಎನ್. ಅವರು ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ಕೆಎಸ್‌ಆರ್‌ಟಿಸಿ ಹೊನ್ನಾಳಿ ಡಿಪೋದಿಂದ ಹೆಚ್ಚುವರಿ ಬಸ್ ಸೇವೆಯನ್ನು ಮಂಜೂರು ಮಾಡಿದ್ದು, ಸೋಮವಾರದಿಂದ ಕಾರ್ಯಾರಂಭಿಸಿದೆ. ಮಾರುತಿ ಕೆ.ಎನ್, ಮಾಜಿ ಗ್ರಾಪಂ ಅಧ್ಯಕ್ಷ ತಿಪ್ಪೇಶ್ ಎಂ.ಎಚ್, ರವಿಕುಮಾರ್, ಮಹಾಬಲೇಶ್, ಚಂದ್ರಶೇಖರ್, ರಾಜಪ್ಪ, ಸಂತೋಷ್ ಇತರರಿದ್ದರು.
ಬಸ್ ಕಾರ್ಯಾಚರಣೆ ಮಾರ್ಗ: ಈ ಬಸ್ ಹೊನ್ನಾಳಿ, ದಾಗಿನಕಟ್ಟೆ, ಬಸವಾಪಟ್ಟಣ, ಕುಂದೂರು, ಕಾರಿಗನೂರು ಕ್ರಾಸ್, ಹದಡಿ, ದಾವಣಗೆರೆ ಮಾರ್ಗದಲ್ಲಿ ಸಂಚರಿಸಲಿದೆ. ಹೊನ್ನಾಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಟು 9.45ಕ್ಕೆ ದಾವಣಗೆರೆ ತಲುಪಲಿದೆ. ನಂತರ ದಾವಣಗೆರೆಯಿಂದ 10.30ಕ್ಕೆ ಹೊರಟು ಮಧ್ಯಾಹ್ನ 12.15ಕ್ಕೆ ಹೊನ್ನಾಳಿ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಹೊನ್ನಾಳಿಯಿಂದ ಹೊರಟು 3.10ಕ್ಕೆ ದಾವಣಗೆರೆ ತಲುಪಲಿದೆ. ಸಂಜೆ 4 ಗಂಟೆಗೆ ದಾವಣಗೆರೆಯಿಂದ ಹೊರಡಲಿದೆ.
ಗ್ರಾಮದಲ್ಲಿ ಸಂಭ್ರಮ: ಹೆಚ್ಚುವರಿ ಬಸ್ ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಕೋಟೆಹಾಳ್ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಬಸ್ಸಿಗೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಹೂವಿನಿಂದ ಅಲಂಕರಿಸಿ ಸ್ವಾಗತಿಸಿದರು. ಸಾರ್ವ ಜನಿಕರ ಬೇಡಿಕೆಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.