ಮಾಯಕೊಂಡ ಕರ್ನಾಟಕ ಪಬ್ಲಿಕ್ ಶಾಲೆಗೆ ಗುರುವಾರ ಡಿಡಿಪಿಐ ಜಿ. ಕೊಟ್ರೇಶ್, ಬಿಇಒ ಪುಷ್ಪಲತಾ, ಜಿಪಂ ಮುಖ್ಯ ಇಂಜಿನಿಯರ್ ಶಿವಕುಮಾರ್, ಪಿಡಿಒ ಹನುಮಂತಪ್ಪ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಶೌಚಗೃಹ, ಕುಡಿಯುವ ನೀರು ಸೇರಿ ಇತರ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.Inspection 
ದಾವಣಗೆರೆ

ಕೆಪಿಎಸ್‌ಗೆ ಅಧಿಕಾರಿಗಳ ತಂಡ Inspection

ಪ್ರಮುಖ ಮುಖ್ಯಾಂಶಗಳು

  • ಮೂಲ ಸೌಕರ್ಯಗಳ ಪರಿಶೀಲನೆ
  • ಶೌಚಗೃಹ ನಿರ್ಮಾಣಕ್ಕೆ ಕ್ರಮ
ಮಾಯಕೊಂಡ: ಮಾಯಕೊಂಡ ಕರ್ನಾಟಕ ಪಬ್ಲಿಕ್ ಶಾಲೆಗೆ ಗುರುವಾರ ಡಿಡಿಪಿಐ ಜಿ. ಕೊಟ್ರೇಶ್, ಬಿಇಒ ಪುಷ್ಪಲತಾ, ಜಿಪಂ ಮುಖ್ಯ ಇಂಜಿನಿಯರ್ ಶಿವಕುಮಾರ್, ಪಿಡಿಒ ಹನುಮಂತಪ್ಪ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಶೌಚಗೃಹ, ಕುಡಿಯುವ ನೀರು ಸೇರಿ ಇತರ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್ ಮಾತನಾಡಿ, ಮಾಯಕೊಂಡ ಕೆಪಿಎಸ್‌ನಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯುವರೆಗಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಪ್ರಾಥಮಿಕ ಮತ್ತು ಪಿಯು ವಿಭಾಗಗಳಿಗೆ ಸಮರ್ಪಕ ಶೌಚಗೃಹವಿದೆ. ಆದರೆ ಪ್ರೌಢಶಾಲಾ ವಿಭಾಗದಲ್ಲಿರುವ ಒಂದು ಶೌಚಗೃಹವನ್ನು 185 ವಿದ್ಯಾರ್ಥಿನಿಯರುವ ಬಳಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಅದಕ್ಕಾಗಿ ಇಲ್ಲಿ ಸದ್ಯದಲ್ಲೆ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲು ಗ್ರಾಮೀಣ ಹಾಗೂ ಪಂಚಾಯತ್‌ರಾಜ್ ಇಲಾಖೆ ಕ್ರಮ ಕೈಗೊಂಡಿದೆ ಎಂದರು.
ಹತ್ತನೇ ತರಗತಿ ವಿದ್ಯಾರ್ಥಿನಿಯರಿಗೆ ಪಿಯು ವಿಭಾಗದ ಶೌಚಗೃಹ ಬಳಸಲು ಅನುಕೂಲ ಮಾಡಿಕೊಡಬೇಕು ಮತ್ತು ಪ್ರೌಢಶಾಲೆಗೆ ಬೋಧನೆ ಮಾಡಲು ಹೆಚ್ಚುವರಿ ಕೊಠಡಿಗಳನ್ನು ನೀಡುವಂತೆ ಪ್ರಾಚಾರ್ಯ ಡಾ. ಬಸವರಾಜಪ್ಪ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಗ್ರಾಪಂ ಪಿಡಿಒ ಹನುಮಂತಪ್ಪ ಮಾತನಾಡಿ, ಕೆಪಿಎಸ್ ಶಾಲೆಗೆ ಅಗತ್ಯವಾಗಿರುವ ಕುಡಿಯುವ ನೀರಿನ ಪೂರೈಕೆ, ಈಗಿರುವ ಶೌಚಗೃಹಗಳ ಸುತ್ತಮುತ್ತ ಸ್ವಚ್ಛತೆ ಮಾಡಲಾಗುತ್ತದೆ. ನೂತನ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಮುಂದಿನ ವಾರದಲ್ಲಿ ನೀಲಿನಕ್ಷೆ ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಕಳಿಸಲಾಗುವುದು ಎಂದರು.
ಇದೇ ವೇಳೆ ಜೆಸಿಬಿ ಯಂತ್ರದ ಮೂಲಕ ಶೌಚಗೃಹದ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.
ಉಪ ಪ್ರಾಚಾರ್ಯ ಟಿ.ಎಸ್. ನಾಗರಾಜ್, ಬಿಇಒ ಪುಷ್ಪಲತಾ, ಇಸಿಒ ಗೋವಿಂದರಾಜು, ಬಸವರಾಜ್, ಬಿಆರ್‌ಸಿ ಚೌಡಪ್ಪ, ಸಿಆರ್‌ಪಿ ಗಾಯತ್ರಿ ಹೊನ್ನಪ್ಪ, ಸಹಾಯಕ ಇಂಜಿನಿಯರ್ ಅಶೋಕ್, ಹಿರಿಯ ಶಿಕ್ಷಕರಾದ ಟಿ. ನಾಗರಾಜಪ್ಪ, ಎಚ್.ಪಿ. ರವಿಕುಮಾರ್ ಮತ್ತಿತರರು ಇದ್ದರು.