ಜಗಳೂರು ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಶಕ್ತಿ ಸಮಾವೇಶದ ಉದ್ಘಾಟನೆಯಲ್ಲಿ ಎಂ. ಕೃಷ್ಣಾರೆಡ್ಡಿ, ಎಂ.ಡಿ. ಕೀರ್ತಿಕುಮಾರ್, ಕೆ.ಪಿ ಪಾಲಯ್ಯ, ರಾ. ವೀರೇಶ್ ಪ್ರಸಾದ್ ಇತರರಿದ್ದರು.Art 
ದಾವಣಗೆರೆ

ಕಲೆ ಉಳಿಸಲು ರೂಪಿಸಬೇಕಿದೆ ಯೋಜನೆ Art

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಹೇಳಿಕೆ
  • ರಾಜ್ಯ ಕಲಾವಿದರ ಸಾಂಸ್ಕೃತಿಕ ಶಕ್ತಿ ಸಮಾವೇಶ
ಜಗಳೂರು: ಐವತ್ತು ಲಕ್ಷ ಕಲಾವಿದರಿರುವ ಕರ್ನಾಟಕದಲ್ಲಿ ಕಲೆ ಉಳಿಯಬೇಕಾದರೆ ಸರ್ಕಾರ ಹೆಚ್ಚು ಒತ್ತು ನೀಡಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಹೇಳಿದರು. Art
ಸ್ಥಳೀಯ ಬಯಲು ರಂಗ ಮಂದಿರದ ಆವರಣದಲ್ಲಿ ಕಲಾವಿದರ ಒಕ್ಕೂಟ ಶನಿವಾರ ಆಯೋಜಿಸಿದ್ದ ರಾಜ್ಯ ಕಲಾವಿದರ ಸಾಂಸ್ಕೃತಿಕ ಶಕ್ತಿ ಸಮಾವೇಶದಲ್ಲಿ ಮಾತನಾಡಿದರು.
ರಂಗಭೂಮಿ ಉಳಿವಿಗೆ ಶ್ರಮಿಸಿದ ಮಹಾನ್ ಚೇತನ ಗುಬ್ಬಿ ವೀರಣ್ಣನವರ ಮಾದರಿಯಲ್ಲೇ ವೀರೇಶ್ ಪ್ರಸಾದ್ ಕೂಡ ಕಲಾವಿದರ ಪರ ದೊಡ್ಡ ಮಟ್ಟದ ಹೋರಾಟ ರೂಪಿಸುತ್ತಿದ್ದಾರೆ. ಅವರ ಈ ಬದ್ಧತೆ ಗುರುತಿಸಿಯೇ ಪಕ್ಷದ ಸಾಂಸ್ಕೃತಿಕ ಘಟಕದ ಜವಾಬ್ದಾರಿ ನೀಡಲಾಗಿದೆ ಎಂದು ಶ್ಲಾಘಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ರಾಜ್ಯದ ನಾನಾ ಕಲಾವಿದರನ್ನು ಒಗ್ಗೂಡಿಸಿ ಸಮಾವೇಶ ಸಂಘಟಿಸಿ ಒಗ್ಗಟ್ಟು ಪ್ರದರ್ಶಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಸಿನಿಮಾ ನಟನೆಗೂ -ರಂಗ ಕಲಾವಿದರಿಗೂ ತುಂಬ ವ್ಯತ್ಯಾಸ ಇದೆ. ಗ್ರಾಮೀಣ ಕಲಾವಿದರ ಜೀವನ ಶೋಚನೀಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಡ ಕಲಾವಿದರಿಗೆ ತಲುಪಿಸಬೇಕಿದೆ ಎಂದರು.
ಕಲಾವಿದರ ಸಂಘದ ರಾಜ್ಯಾಧ್ಯಕ್ಷ ರಾ. ವೀರೇಶ್ ಪ್ರಸಾದ್(ಗುಬ್ಬಿ ವೀರಣ್ಣ) ಮಾತನಾಡಿ, ರಾಜ್ಯದಲ್ಲಿ 50 ಲಕ್ಷ ಕಲಾವಿದರಿದ್ದಾರೆ. ಮುಂದಿನ ರಾಜ್ಯ ಬಜೆಟ್‌ನಲ್ಲಿ ಸುಮಾರು 5 ಸಾವಿರ ಕೋಟಿ ಹಣವನ್ನು ಮೀಸಲಿಡಬೇಕು. ಕಲಾವಿದರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ 21 ಸಾಧಕರಿಗೆ ಕರ್ನಾಟಕ ಜನಪದ ಪದ್ಮಶ್ರೀ, ಕರ್ನಾಟಕ ರಂಗ ಪದ್ಮಶ್ರೀ, ಕರ್ನಾಟಕ ಚಿತ್ರ ಪದ್ಮಶ್ರೀ ಬಿರುದು ಪ್ರದಾನ ಮಾಡಲಾಯಿತು. ಭಾಗವಹಿಸಿದ ಎಲ್ಲ ಕಲಾವಿದರು. ಕಲಾ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಹೊಸಪೇಟೆಯ ಇಷ್ಟಗೇರಿ ಮಠದ ಅನುರಾಧೇಶ್ವರಿ ಅಮ್ಮ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಹಾಗೂ ಮುಖಂಡ ರಾಜೂ ಗೌಡ ಮಾತನಾಡಿದರು.
ಪಪಂ ಮಾಜಿ ಅಧ್ಯಕ್ಷ ನಾಗೇಂದ್ರ ರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಾ, ಪ್ರಧಾನ ಕಾರ್ಯದರ್ಶಿ ನಾಗರತ್ನಾ,ಸಂಘಟನಾ ಕಾರ್ಯದರ್ಶಿ ವೃಷಭೇಂದ್ರ, ಜಿಲ್ಲಾಧ್ಯಕ್ಷ ಮರೇನಹಳ್ಳಿ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಶಿರಾ ತಾಲೂಕಾಧ್ಯಕ್ಷ ಬೊಮ್ಮೆಗೌಡ, ಮಹಿಳಾ ಘಟಕ ಜಿಲ್ಲಾ ಕಾರ್ಯದರ್ಶಿ ಭಾರತಿ, ತಾಲೂಕಾಧ್ಯಕ್ಷೆ ಶಾರದಮ್ಮ, ಯುವ ಘಟಕ ಜಿಲ್ಲಾಧ್ಯಕ್ಷ ಸಂದೀಪ್ ಮತ್ತಿತರರಿದ್ದರು