ಹಿರಿಯೂರು ತಾಲೂಕಿನ ಖಂಡೇನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ನುಡಿ-ನಮನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹರ್ಷಿಣಿ ಸುಧಾಕರ್ ಜ್ಯೋತಿ ಬೆಳಗಿಸಿದರು. ಸುಹಾಸ್, ಸ್ಪೂರ್ತಿ, ಈ. ಗೌಡ ಇದ್ದರು. By-election
- ಖಂಡೇನಹಳ್ಳಿಯಲ್ಲಿ ಕಾರ್ಯಕರ್ತರ ಸಭೆ
- ಸುಹಾಸ್ ಭವಿಷ್ಯ ಕ್ಷೇತ್ರದ ಜನತೆಯ ಕೈಯಲ್ಲಿ
ಹಿರಿಯೂರು: ಉಪ ಚುನಾವಣೆಯಲ್ಲಿ ಪುತ್ರನ ಭವಿಷ್ಯವನ್ನು ಹಿರಿಯೂರು ಕ್ಷೇತ್ರದ ಜನತೆಗೆ ಬಿಡುತ್ತೇನೆ ಎಂದು ಹೇಳುವ ಮೂಲಕ ದಿ. ಸುಧಾಕರ್ ಪತ್ನಿ ಹರ್ಷಿಣಿ ಭಾವನಾತ್ಮಕ ಮಾತುಗಳಿಂದ ಮತಬೇಟೆ ನಡೆಸಿದರು. By-election
ತಾಲೂಕಿನ ಖಂಡೇನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ನುಡಿ-ನಮನ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಉಪ ಚುನಾವಣೆಯಲ್ಲಿ ನನ್ನ ಪುತ್ರ ಸ್ಪರ್ಧಿಸುವುದು ಪಕ್ಷದ ನಿರ್ಧಾರ. ಕ್ಷೇತ್ರದ ಜನತೆ ನಮ್ಮ ಕುಟುಂಬದ ಮೇಲೆ ಅಪಾರ ನಂಬಿಕೆ, ಪ್ರೀತಿ ಇಟ್ಟಿದೆ. ಅದೇ ನಮ್ಮ ಶಕ್ತಿ. ಜನತೆ ಸೇವೆ ಮಾಡಲು ಮತ್ತೆ ಇಲ್ಲಿಗೆ ಬಂದಿದ್ದೇವೆ. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದು, ಅವನ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು.
ಯುವ ಮುಖಂಡ ಸುಹಾಸ್ ಸುಧಾಕರ್ ಮಾತನಾಡಿ, ಜನರ ಸೇವೆ, ಸಮಾಜಮುಖಿ ಕಾರ್ಯ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ನಿಮ್ಮ ಮನೆ ಮಗನೆಂದು ಭಾವಿಸಿ ನನ್ನನ್ನು ಬೆಂಬಲಿಸಿ. ಸದಾ ಜನರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ ಎಂದರು.
ಜಿಪಂ ಮಾಜಿ ಸದಸ್ಯೆ ಗೀತಾ ಮಾತನಾಡಿ, ಕರೊನಾ ಸಂಕಷ್ಟದಲ್ಲಿ ರೈತರು, ಬಡವರು, ಜನ ಸಾಮಾನ್ಯರ ಮನೆ ಬಾಗಿಲಿಗೆ ಬಂದು ಆರ್ಥಿಕ ಸಹಾಯ ಮಾಡಿದ್ದು ಸುಧಾಕರ್ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸ್ಪೂರ್ತಿ ಸುಧಾಕರ್ ಮಾತನಾಡಿ, ತಾಲೂಕಿನಲ್ಲಿ ಜಾತಿ ಬಲವಿಲ್ಲವಾದರೂ ಜನರ ಪ್ರೀತಿ ವಿಶ್ವಾಸ ಗಳಿಸಿ, ರಾಜಕೀಯದಲ್ಲಿ ಬೆಳೆದರು. ಅಭಿವೃದ್ಧಿಗೆ ಶ್ರಮಿಸಿದರು. ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು ಎಂದರು.
ಅದ್ಧೂರಿ ಸ್ವಾಗತ: ಗ್ರಾಮಕ್ಕೆ ಆಗಮಿಸಿದ ಹರ್ಷಿಣಿ ಸುಧಾಕರ್, ಸುಹಾಸ್, ಸ್ಪೂರ್ತಿ ನಿತೇಶ್ ಅವರಿಗೆ ಗ್ರಾಮಸ್ಥರು ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಜಿಪಂ ಕೆಡಿಪಿ ಸದಸ್ಯ ತಿಮ್ಮಣ್ಣ, ಡಿ. ಚಿದಾನಂದ್, ಎಸ್.ಕೆ. ಶಿವಮೂರ್ತಿ, ಶಿವಮ್ಮ, ನಿವೃತ್ತ ಯೋಧ ಡಿ.ಎಂ. ಯೋಗೇಶ್, ಮಂಗಳಾ, ವೆಂಕಟೇಶ್, ಕೆ.ಎನ್. ನರಸಿಂಹಮೂರ್ತಿ, ರವಿಚಂದ್ರನಾಯ್ಕ, ಕೆ.ಜಿ. ತಿಮ್ಮರಾಯಪ್ಪ, ಜಿಯಾವುಲ್ಲಾ, ಕೆ.ಟಿ. ಶ್ರೀನಿವಾಸ್ ಇತರರು ಇದ್ದರು.