ಜಗಳೂರು ಪಟ್ಟಣದಲ್ಲಿ ಶಾಸಕ ಬಿ. ದೇವೇಂದ್ರಪ್ಪ ತಮ್ಮ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದರು. ಡಾ. ದಂಡಿನ ಶಿವಕುವಾರ್, ರವಿಚಂದ್ರ, ಕೊಟ್ರೇಶ್, ನೇರಲಗುಂಟೆ ತಿಪ್ಪೇಸ್ವಾಮಿ, ಕೆ.ಪಿ.ಪಾಲಯ್ಯ, ಎನ್.ಟಿ. ಎರ‌್ರಿಸ್ವಾಮಿ ಇತರರು ಇದ್ದರು. Library
- ಶಾಸಕ ಬಿ. ದೇವೇಂದ್ರಪ್ಪ ನಿವಾಸದಲ್ಲಿ ಚಾಲನೆ
- ಅಧ್ಯಯನ ಸಂಸ್ಕೃತಿ ಪುನರುಜ್ಜೀವನಕ್ಕೆ ಹೊಸ ಯೋಜನೆ
ಜಗಳೂರು: ಡಿಜಿಟಲ್ ಯುಗದಲ್ಲಿ ಓದುವ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆರಂಭಿಸಿರುವ ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಶಾಸಕ ಬಿ. ದೇವೇಂದ್ರಪ್ಪ ತಮ್ಮ ನಿವಾಸದಲ್ಲಿ ಭಾನುವಾರ ಚಾಲನೆ ನೀಡಿದರು. Library
ಎಲ್ಲರ ಮನೆಗಳಲ್ಲಿ ಅಡುಗೆ ಮನೆ, ಪೂಜಾ ಕೋಣೆ ಇರುವಂತೆ ಪುಟ್ಟ ಪುಸ್ತಕ ಭಂಡಾರ ಇರಬೇಕೆಂಬ ಉದ್ದೇಶದಿಂದ ಪಟ್ಟಣದ ಗಿರಣಿ ತಿವ್ಮಾರೆಡ್ಡಿ ಲೇಔಟ್‌ನ ಶಾಸಕರ ನಿವಾಸದಿಂದಲೇ ಮನೆಗೊಂದು ಗ್ರಂಥಾಲಯ ಆರಂಭಿಸಲಾಯಿತು.
ನಂತರ ಶಾಸಕ ಬಿ. ದೇವೇಂದ್ರಪ್ಪ ವಾತನಾಡಿ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಓದುಗರಿಗೆ ಅಮೂಲ್ಯ ವಾಹಿತಿ ಒದಗಿಸಲು ಸರ್ಕಾರ ಮನೆಗೊಂದು ಗ್ರಂಥಾಲಯ ಆರಂಭಿಸಿದೆ. ಗ್ರಂಥಾಲಯಗಳು ಆಸಕ್ತಿಯಿಂದ ಓದಲು ಬರುವವರಿಗೆ ಜ್ಞಾನವನ್ನು ಧಾರೆ ಎರೆಯುವ ಅಕ್ಷಯ ಭಂಡಾರವಾಗಿದೆ. ಹೆಚ್ಚು ಅಧ್ಯಯನದಿಂದಾಗಿ ಭಾಷಾ ಜ್ಞಾನ, ವ್ಯಕ್ತಿತ್ವ ವಿಕಸವಾಗುತ್ತದೆ ಎಂದರು.
ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ ವಾತನಾಡಿ, ಜಗಳೂರು ಆರ್ಥಿಕವಾಗಿ ಹಿಂದುಳಿದಿರಬುದು, ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿದೆ. ಪ್ರತಿಯೊಬ್ಬರು ಗ್ರಂಥಾಲಯವನ್ನು ಬಳಸಿಕೊಂಡು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆ ಸಾಗಬೇಕು ಎಂದರು. ಚಿತ್ರದುರ್ಗ ಎಎಸ್‌ಪಿ ಡಾ. ದಂಡಿನ ಶಿವಕುವಾರ್ ವಾತನಾಡಿ, ಅಕ್ಷರ, ಅರಿವು ಮತ್ತು ಅನ್ನ ಶೋಷಿತರ ಧ್ವನಿಯಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ತಳಸಮುದಾಯ ಹಾಗೂ ಶೋಷಿತರಿಗೆ ಅಕ್ಷರವೇ ನೈಜ ಸಂಪತ್ತು. ಈಗಿನ ಎಐ ಯುಗದಲ್ಲಿ ಗುಂಪುಗಾರಿಕೆಗೆ ಯಾರೂ ಹೆದರುವುದಿಲ್ಲ. ಕೇವಲ ಜ್ಞಾನಕ್ಕೆ ವಾತ್ರ ತಲೆಬಾಗುತ್ತಾರೆ ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ನೇರಲಗುಂಟೆ ತಿಪ್ಪೇಸ್ವಾಮಿ, ಕೆಪಿಸಿಸಿ ಎಸ್ಟಿ ಟಕದ ವಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ವಾತನಾಡಿದರು.
ಪತ್ರಕರ್ತ ಮತ್ತು ವಕೀಲ ಡಿ. ಶ್ರೀನಿವಾಸ್, ಎನ್.ಎಂ. ರವಿಕುವಾರ್, ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ, ಕೆ.ಟಿ. ಗಾಯತ್ರಿದೇವಿ, ಎಲ್.ಎಂ. ಪ್ರಭಾಕರ್ ಲಕ್ಕೋಳ್, ಆರ್. ಖಾಸಿಂ ಸಾಬ್, ಡಿ.ಟಿ. ಆದಂ, ಡಿ.ಸಿ. ಮಲ್ಲಿಕಾರ್ಜುನ್ ಮತ್ತು ಕಸಾಪ ಅಧ್ಯಕ್ಷೆ ಕೆ. ಸುಜಾತಮ್ಮ ರಾಜು ತಮ್ಮ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನಗೊಳಿಸಿದರು.
ಸಿಐ ಸಿದ್ರಾಮಯ್ಯ, ಷಂಷೀರ್ ಅಹಮದ್, ನಿವೃತ್ತ ಕಮಿಷನರ್ ಎಂ.ಬಿ. ವಾರಣ್ಣ, ಜಿಲ್ಲಾ ಮುಖ್ಯ ಗ್ರಂಥಪಾಲಕ ಯಮನೂರಪ್ಪ, ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ಬಿಇಒ ಹಾಲಮೂರ್ತಿ, ಗ್ರಂಥಪಾಲಕ ರುದ್ರಪ್ಪ, ಎಂ.ಬಿ. ಬೈರೇಶ್, ಜೆ.ಕೆ. ರೇವಣಸಿದ್ದಪ್ಪ, ಓಮಣ್ಣ, ಜಿಪಂ ವಾಜಿ ಸದಸ್ಯ ನಾಗರಾಜ್, ತಾಪಂ ಇಒ ಕೆಂಚಪ್ಪ, ಅನ್ನಪೂರ್ಣ ಪಾಟೀಲ್, ಸುಕನ್ಯಾ ಇತರರು ಇದ್ದರು.