ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವಾಯಕೊಂಡ ಹಾಗೂ ಕೊಡಗನೂರು ಸರ್ಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಕಂಪನಿಯ ಅಧಿಕಾರಿಗಳು ಭಾಗವಹಿಸಿದ್ದರು. Recruitment 
ದಾವಣಗೆರೆ

ಕ್ಯಾಂಪಸ್ ನೇಮಕಾತಿಯಲ್ಲಿ 26 ವಿದ್ಯಾರ್ಥಿಗಳು ಆಯ್ಕೆ Recruitment

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • 26 ವಿದ್ಯಾರ್ಥಿಗಳು ಆಯ್ಕೆ
  • ವಾಗೋಡ್ ಲೇಸರ್ ವ್ಯಾಚಿಂಗ್ ಪ್ರೈ.ಲಿ. ಸಂಸ್ಥೆಯಿಂದ ಕ್ಯಾಂಪಸ್ ನೇಮಕಾತಿ
ಮಾಯಕೊಂಡ: ಮಾಯಕೊಂಡ ಮತ್ತು ಕೊಡಗನೂರು ಗ್ರಾಮಗಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ ಕಾಲೇಜ್‌ಗಳ) ವಿದ್ಯಾರ್ಥಿಗಳನ್ನು ಬೆಂಗಳೂರು ವಾಗೋಡ್ ಲೇಸರ್ ವ್ಯಾಚಿಂಗ್ ಪ್ರೈ.ಲಿ. ಸಂಸ್ಥೆ ಬುಧವಾರ ಕ್ಯಾಂಪಸ್ ನೇಮಕಾತಿ ನಡೆಸಿ 26ವಿದ್ಯಾರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ವಾಡಿಕೊಂಡಿತು. Recruitment
ವಾಯಕೊಂಡ ಕೈಗಾರಿಕಾ ಸಂಸ್ಥೆ ಪ್ರಾಚಾರ್ಯ ಪಿ.ಎಂ. ವೀರೇಶ್ ವಾತನಾಡಿ, ಕೊಡಗನೂರು ಮತ್ತು ವಾಯಕೊಂಡ ಸರ್ಕಾರಿ ಕೈಗಾರಿಕಾ ಸಂಸ್ಥೆಗಳಲ್ಲಿ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ಕೋರ್ಸ್‌ಗಳು ನಡೆಯುತ್ತಿವೆ. 48 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಎಲೆಕ್ಟ್ರಿಷಿಯನ್‌ಗೆ 19 ಹಾಗೂ ಫಿಟ್ಟರ್‌ಗೆ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.
ಕಂಪನಿ ಜನರಲ್ ಮೆನೇಜರ್ ಸತೀಶಕುವಾರ ವಾತನಾಡಿ, ಆಯ್ಕೆಯಾದ ಅಭ್ಯರ್ಥಿಗಳಿಗೆ 6 ತಿಂಗಳ ಕಾಲ ಊಟ, ವಸತಿಯೊಂದಿಗೆ ಸಂಬಳ ಸಹಿತ ತರಬೇತಿ ನೀಡಲಾಗುವುದು ಎಂದರು.
ಕಂಪನಿ ವ್ಯಾನೇಜರ್ ಅನಿಲ್ ಕುವಾರ್, ಎಚ್.ಆರ್. ವೀರೇಶ್, ಶಾರದಮ್ಮ, ಶ್ರುತಿ, ಸಂದೀಪ, ಅನುಪಮ ಇತರರು ಇದ್ದರು.