ಜಿಲ್ಲೆ

ಶೇ 90ಕ್ಕಿಂತ ಅಧಿಕ ಮತದಾನದ ಗುರಿ

ರಮೇಶ ಜಹಗೀರದಾರ್

ದಾವಣಗೆರೆ : ಲೋಕಸಭಾ ಚುನಾವಣೆಯಲ್ಲಿ ಶೇ.90ಕ್ಕಿಂತ ಹೆಚ್ಚು ಮತದಾನದ ಗುರಿ ಹೊಂದುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ತಿಳಿಸಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಭಾವಸಾರ ವಿಷನ್ ಇಂಡಿಯಾ ಸಹಯೋಗದಲ್ಲಿ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
 ದೇಶದ ಆಡಳಿತವನ್ನು ಬದಲಾಯಿಸುವ ಶಕ್ತಿ ಮತದಾರರಲ್ಲಿದೆ. ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಿದರೆ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ ಎಂದರು.
 ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಬಿಸಿಎಂ ಅಧಿಕಾರಿ ಗಾಯತ್ರಿ, ವಿವಿಧ ಇಲಾಖೆ ವಾರ್ಡನ್‌ಗಳು, ಭಾವಸಾರ ಮಿಷನ್ ಇಂಡಿಯಾ ಅಧ್ಯಕ್ಷೆ ಸರಳಾ ಆಮ್ಟೆ, ಕಾರ್ಯದರ್ಶಿ ರಮೇಶ್ ಗುಜ್ಜಾರ್, ಉಪಾಧ್ಯಕ್ಷ ಅಶೋಕ್ ನವಲೆ, ರಮೇಶ್ ಅಂಬರ್‌ಕರ್, ಅರುಣ್ ಗುಜ್ಜಾರ್, ನಿಂಗೋಜಿರಾವ್ ಗುಜ್ಜಾರ್, ರಮೇಶ್ ತೇಲ್ಕರ್ ಇತರರು ಇದ್ದರು.
 ನಗರದ ಜಯದೇವ ವೃತ್ತದಿಂದ ಹೊರಟ ಮತದಾನ ಜಾಗೃತಿ ಜಾಥಾವು ಅಂಬೇಡ್ಕರ್ ಸರ್ಕಲ್ ಮೂಲಕ ವಿದ್ಯಾರ್ಥಿ ಭವನ ಮಾರ್ಗವಾಗಿ ಗುಂಡಿ ಸರ್ಕಲ್ ತಲುಪಿತು.