ಜಿಲ್ಲೆ

ಯುಬಿಡಿಟಿ ಉಳಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ರಮೇಶ ಜಹಗೀರದಾರ್

ದಾವಣಗೆರೆ: ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಜನ್ಮದಿನ ಆಚರಿಸುವ ಮೂಲಕ ಯುಬಿಡಿಟಿ ಉಳಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಮಾತನಾಡಿ, ಶಿಕ್ಷಣದ ವ್ಯಾಪಾರೀಕರಣದಿಂದ ಅನೇಕ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಶಾಲಾ, ಕಾಲೇಜುಗಳಿಗೆ ನೀಡುತ್ತಿರುವ ಅನುದಾನವನ್ನು ಸರ್ಕಾರ ಕಡಿತಗೊಳಿಸುತ್ತಿದೆ ಎಂದು ದೂರಿದರು.  ಈಶ್ವರ್ ಚಂದ್ರ ವಿದ್ಯಾಸಾಗರರು ಮಾನವ ಸಮಾಜದ ಏಳಿಗೆಗೆ ಅವಶ್ಯವಿರುವ ವಿಜ್ಞಾನ, ಅರ್ಥಶಾಸ್ತ್ರ, ಗಣಿತ, ತರ್ಕ ಹಾಗೂ ಇಂಗ್ಲೀಷ್ ಶಿಕ್ಷಣದ ಮಹತ್ವ ಸಾರಿದ್ದರು ಎಂದು ತಿಳಿಸಿದರು.  ಯುಬಿಡಿಟಿ ಕಾಲೇಜಿನಲ್ಲಿ ನಡೆಯುತ್ತಿರುವ ಶೇ.50 ಸೀಟುಗಳ ಮಾರಾಟದ ವಿರುದ್ಧದ ಇನ್ನೂ ಹೆಚ್ಚು ಹೋರಾಟ ಕೈಗೊಳ್ಳುವ ಸಂಕಲ್ಪವನ್ನು ನೆರೆದಿದ್ದ ಎಲ್ಲ ವಿದ್ಯಾರ್ಥಿಗಳು ತೆಗೆದುಕೊಂಡರು. ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕಾರ್ಯದರ್ಶಿ ಸುಮನ್ ಇದ್ದರು.