ದಾವಣಗೆರೆ : ಇಲ್ಲಿನ ಸರಸ್ವತಿ ನಗರದ ಕೆ.ಎಸ್.ಎಸ್. ಶಾಲೆಯ ಬಳಿ ಇರುವ ಪಾರ್ಕ್‌ನಲ್ಲಿ ಸೋಮವಾರ, ಶ್ರೀ ಸನ್ನಿಧಿ ಗ್ರಂಥಾಲಯ ಹಾಗೂ ಗೋ ಗ್ರೀನ್ ಸಂಸ್ಥೆ ಸಹಯೋಗದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚುವ ಬದಲಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಂಥಾಲಯದ ಸಂಸ್ಥಾಪಕಿ ಮಾನಸ ವಿ.ಎಸ್, ವಿಜಯ್ ಕುಮಾರ್. ವೈ. ಎನ್, ಗೋ ಗ್ರೀನ್ ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಬಗರೆ, ಪ್ರವೀಣ್ ಕುಮಾರ್ ಆರ್.ಬಿ, ಮಹಮ್ಮದ್ ಗೌಸ್, ಮನೋಹರ್. ವಿ.ಎಸ್. ಅರ್ಪಿತ, ಶೃತಿ, ವಿನುತಾ, ಶ್ರೀಧರ್, ಅರುಣ್ ಕುಮಾರ್, ನಾಗರಾಜ್, ಕೃತಿಕಾ ಬಗರೆ ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.