ದಾವಣಗೆರೆ : ಭಾರತದ ಪ್ರಮುಖ ಟ್ರಾವೆಲ್ ಸರ್ವಿಸಸ್ ಸಂಸ್ಥೆ ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ವತಿಯಿಂದ ಟ್ರಾವೆಲ್ ಮೇಳವನ್ನು ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಈ ಮೇಳಕ್ಕೆ ಗ್ರಾಹಕರು ಭೇಟಿ ನೀಡಿ ವಿವಿಧ ದೇಶಗಳ ಪ್ರವಾಸದ ಮಾಹಿತಿ ಪಡೆದುಕೊಂಡರು. ಅವರಲ್ಲಿ ಬಹುತೇಕರು ಮೊದಲ ಬಾರಿ ಪ್ರವಾಸ ಕೈಗೊಳ್ಳುವವರೇ ಇದ್ದರು. ಸಿಂಗಾಪುರ, ಮಲೇಷ್ಯಾ, ವಿಯೆಟ್ನಾಂ, ಥೈಲ್ಯಾಂಡ್, ಭೂತಾನ್ ಇನ್ನಿತರ ದೇಶಗಳಿಗೆ ಪ್ರವಾಸಕ್ಕೆ ತೆರಳಲು ಇರುವ ದರ ಮತ್ತು ಡಿಸ್ಕೌಂಟ್ ಕುರಿತು ಆಸಕ್ತಿಯಿಂದ ಕೇಳಿದರು. ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹಾಜರಿದ್ದು ಗ್ರಾಹಕರಿಗೆ ಮಾಹಿತಿ ನೀಡಿದರು.