ಜಿಲ್ಲೆ

ಈಜು ಸ್ಪರ್ಧೆಯಲ್ಲಿ ವೈಯಕ್ತಿಕ ಚಾಂಪಿಯನ್‌ಷಿಪ್

ರಮೇಶ ಜಹಗೀರದಾರ್

ದಾವಣಗೆರೆ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಕಳಿಂಗ ಇನ್‌ಸ್ಟಿಟ್ಯೂಟ್ ಆ್ ಸೋಶಿಯಲ್ ಸೈನ್ಸಸ್ ಸಹಯೋಗದಲ್ಲಿ ಒಡಿಶಾದ ಭುವನೇಶ್ವರದಲ್ಲಿ ಜೂನ್ 9ರಿಂದ 12ರ ವರೆಗೆ ನಡೆದ ಜನಜಾತಿಯಾ ಖೇಲ್ ಮಹೋತ್ಸವದ ಈಜು ಸ್ಪರ್ಧೆಯಲ್ಲಿ ದಾವಣಗೆರೆಯ ಕ್ರೀಡಾಪಟುಗಳಾದ ಮಣಿಕಂಠ ಎಲ್. ಮತ್ತು ನಿಧಿ ಶಶಿಧರ ವೈಯಕ್ತಿಕ ಚಾಂಪಿಯನ್‌ಷಿಪ್ ಪಡೆದಿದ್ದಾರೆ.
 ಪುರುಷರ ವಿಭಾಗದಲ್ಲಿ ಮಣಿಕಂಠ ಎಲ್. 4 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ನಿಧಿ ಶಶಿಧರ 4 ಚಿನ್ನ, 1 ಬೆಳ್ಳಿಯ ಪದಕ ಪಡೆದರು.
 ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ಮೇ 30 ರಿಂದ ಜೂನ್ 2ರ ವರೆಗೆ ನಡೆದ ಈಜು ಕ್ರೀಡಾಕೂಟದಲ್ಲಿ ಮಣಿಕಂಠ ಎಲ್. ತಲಾ 1 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು. ಮಹಿಳೆಯರ ವಿಭಾಗದಲ್ಲಿ ನಿಧಿ ಶಶಿಧರ 1 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಕೊರಳಿಗೇರಿಸಿದರು.
 ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಣಿಕಂಠ ಎಲ್. 2 ಚಿನ್ನ, 1 ಕಂಚು ಪಡೆದರು. ಕ್ರೀಡಾಪಟುಗಳ ಸಾಧನೆಯ ಬಗ್ಗೆ ದಾವಣಗೆರೆ ಸ್ವಿಮ್ಮಿಂಗ್ ಅಕ್ವಾಟಿಕ್ಸ್ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಶಶಿಧರ್, ಉಪಾಧ್ಯಕ್ಷೆ ಗೀತಾ ರಾಮಲಿಂಗಪ್ಪ, ಕಾರ್ಯದರ್ಶಿ ಲಕ್ಷ್ಮಣ ಬಿ. ಹರ್ಷ ವ್ಯಕ್ತಪಡಿಸಿದ್ದಾರೆ.