ಜಿಲ್ಲೆ

ಬಸವಣ್ಣನ ವಚನಗಳು ಬದುಕಿಗೆ ರಾಜಮಾರ್ಗ

ರಮೇಶ ಜಹಗೀರದಾರ್

ದಾವಣಗೆರೆ : ಬಸವಣ್ಣನವರ ವಚನಗಳು ನಮ್ಮ ಬದುಕಿಗೆ ರಾಜಮಾರ್ಗವಾಗಿವೆ. ಅವುಗಳನ್ನು ಅನುಷ್ಠಾನಕ್ಕೆ ತಂದರೆ ಬದುಕು ಸಾರ್ಥಕವಾಗಲಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
 ನಗರದ ವಿರಕ್ತಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದ ನೇತೃತ್ವ ವಹಿಸಿ ಮಾತನಾಡಿ, ಬಸವಪಥ ನಮ್ಮ ದಾರಿಯಾಗಬೇಕು. ಆಗ ಜೀವನದ ಎಲ್ಲ ಸಮಸ್ಯೆ ಪರಿಹಾರವಾಗಲು ಸಾಧ್ಯ ಎಂದು ತಿಳಿಸಿದರು.
 ದೇವರು ಹೊರಗೆಲ್ಲೂ ಇಲ್ಲ, ಮಾನವರಲ್ಲಿಯೇ ದೇವರನ್ನು ಕಾಣಲು ದೇಹವೇ ದೇಗುಲ ಎಂದರು. ದೇಹ ದೇವಾಲಯವಾದರೆ ಜಗಳಕ್ಕೆ ಜಾಗವಿಲ್ಲ. ಮೂರನೇ ವಿಶ್ವಯುದ್ಧವೂ ನಡೆಯಲು ಸಾಧ್ಯವಿಲ್ಲ. ವಿಶ್ವದಲ್ಲಿ ಹಾಗೂ ಬದುಕಿನಲ್ಲಿ ಸುಖ, ಶಾಂತಿ ನೆಲೆಸಲು ಬಸವತತ್ವ ಪಾಲನೆ ಅಗತ್ಯ ಎಂದು ಹೇಳಿದರು.  
 ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ, ಮುಖಂಡರಾದ ಎಸ್. ಓಂಕಾರಪ್ಪ , ಹಾಸಭಾವಿ ಕರಿಬಸಪ್ಪ, ಲಂಬಿ ಮುರುಗೇಶ್, ಡಾ. ನಸೀರ್ ಅಹಮದ್,  ಬೆಳ್ಳೂಡಿ ಮಂಜುನಾಥ್, ಸಾಲಿಗ್ರಾಮ ಗಣೇಶ್ ಶೆಣೈ, ಚಿಂದೋಡಿ ಶಂಭುಲಿಂಗಪ್ಪ, ಉಮೇಶ್ ಕುದರಿ, ಚನ್ನಬಸವ ಶೀಲವಂತ್, ಮಹದೇವಮ್ಮ, ಸುಜಾತಾ ಬೂಸ್ನೂರ್, ಶಶಿಧರ್ ಬಸಾಪುರ, ಎಂ.ಸಿ. ರೇಖಾ ಇತರರಿದ್ದರು.
 ಬಸವತತ್ವ ಪ್ರಸಾರ ಮಾಡಲು ತಯಾರಾದ ಯುವಕರಿಗೆ ಇದೇ ಸಂದರ್ಭದಲ್ಲಿ ವಚನಮೂರ್ತಿ ದೀಕ್ಷೆ ನೀಡಲಾಯಿತು.
 ಚಿತ್ರ : ಡಿವಿಜಿ ಬಸವಪ್ರಭು ಶ್ರೀ
 ದಾವಣಗೆರೆಯ ವಿರಕ್ತಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ, ಕಣಕುಪ್ಪಿ ಮುರುಗೇಶಪ್ಪ, ಮುಖಂಡರಾದ ಎಸ್. ಓಂಕಾರಪ್ಪ , ಹಾಸಭಾವಿ ಕರಿಬಸಪ್ಪ, ಲಂಬಿ ಮುರುಗೇಶ್, ಡಾ. ನಸೀರ್ ಅಹಮದ್ ಇತರರು ಇದ್ದರು.