ಜಿಲ್ಲೆ

ದಾವಣಗೆರೆಗೆ 23 ರಂದು ಶೃಂಗೇರಿ ಜಗದ್ಗುರುಗಳ ಆಗಮನ

ರಮೇಶ ಜಹಗೀರದಾರ್

ದಾವಣಗೆರೆ  : ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಮೇ 23 ಮತ್ತು 24 ರಂದು ನಗರಕ್ಕೆ ಆಗಮಿಸಲಿದ್ದಾರೆ.  ಮೇ 23ರ ಸಂಜೆ 6 ಗಂಟೆಗೆ ಶಾರದಾಂಬ ದೇವಸ್ಥಾನಕ್ಕೆ ಆಗಮಿಸಲಿದ್ದು ಪೂರ್ಣ ಕುಂಭದೊಂದಿಗೆ ಸ್ವಾಮೀಜಿ ಅವರನ್ನು ಸ್ವಾಗತಿಸಲಾಗುವುದು. ನಂತರ ಶಂಕರ ಸಮುದಾಯ ಭವನದಲ್ಲಿ ಗುರುಗಳಿಂದ ಆಶೀರ್ವಚನ. ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ, ಶಾರದಾಂಬ ಭಜನಾ ಮಂಡಳಿಯಿಂದ ಸ್ತೋತ್ರ ಪಠಣ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.  24ರಂದು 10 ಗಂಟೆಗೆ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ವಿತರಣೆ, 12 ಗಂಟೆಗೆ ಗುರುಗಳು ಗೋಕರ್ಣಕ್ಕೆ ಪ್ರಯಾಣ ಬೆಳೆಸುವರು. ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕೆಂದು ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ, ಕಾರ್ಯದರ್ಶಿ ಶ್ರೀನಿವಾಸ ಜೋಷಿ ತಿಳಿಸಿದ್ದಾರೆ.