ಜಿಲ್ಲೆ

ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ

ರಮೇಶ ಜಹಗೀರದಾರ್

ದಾವಣಗೆರೆ : ದಾವಣಗೆರೆ ತಾಲೂಕು ಕೈದಾಳೆ ಗ್ರಾಮದವರಾದ ಸಿಆರ್‌ಪಿಎಫ್ ಯೋಧ ಉಮೇಶ್(33) ಆಂಧ್ರಪ್ರದೇಶದ ವಿಜಯವಾಡದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಉಮೇಶ್ ಛತ್ತೀಸ್‌ಗಢದ ಕೊಂಟಾ ಬೆಟಾಲಿಯನ್ 217ರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಜೀವನದಲ್ಲಿ ಜುಗುಪ್ಸೆಗೊಂಡಿದ್ದರು, ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆಗೆ ಅದೇ ಕಾರಣ ಇರಬಹುದು ಎಂದು ಮೂಲಗಳು ಹೇಳಿವೆ.  ಉಮೇಶ್ ಅವರು ಮಾರ್ಚ್ ಮೊದಲ ವಾರದಲ್ಲಿ ಕೈದಾಳೆ ಗ್ರಾಮಕ್ಕೆ ಬಂದಿದ್ದರು. ಕಳೆದ ಶನಿವಾರವಷ್ಟೇ ಮತ್ತೆ ಕರ್ತವ್ಯಕ್ಕೆ ತೆರಳಿದ್ದರು. ಸೋಮವಾರ ವಿಜಯವಾಡದ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಉಮೇಶ್ ಅವರ ಮೃತ ದೇಹವನ್ನು ಬುಧವಾರ ಬೆಳಗ್ಗೆ ಕೈದಾಳೆಗೆ ತರಲಾಯಿತು. ಗ್ರಾಮದ ರುದ್ರಭೂಮಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಿಆರ್‌ಪಿಎಫ್ ಯೋಧರು ಇದ್ದರು. ಉಮೇಶ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.