ಜಿಲ್ಲೆ

ಜಿಲ್ಲಾ ವರದಿಗಾರರ ಕೂಟದಿಂದ ಸ್ವಾತಂತ್ರ್ಯೋತ್ಸವ

ರಮೇಶ ಜಹಗೀರದಾರ್

ದಾವಣಗೆರೆ: ನಗರದ ಕೆಬಿ ಬಡಾವಣೆಯಲ್ಲಿರುವ ಜಿಲ್ಲಾ ವರದಿಗಾರರ ಕೂಟದಿಂದ ಮಂಗಳವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಹಿರಿಯ ಪತ್ರಕರ್ತ ಜಿ.ಎಂ.ಆರ್. ಆರಾಧ್ಯ ಧ್ವಜಾರೋಹಣ ನೆರವೇರಿಸಿದರು. ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಪ್ರಧಾನ ಕಾರ್ಯದರ್ಶಿ ಸಿ. ವರದರಾಜ್ ಮಾತನಾಡಿದರು.
 ಪತ್ರಕರ್ತರಾದ ತಾರಾನಾಥ್, ಮಂಜುನಾಥ್ ಕಾಡಜ್ಜಿ, ಮಧು ನಾಗರಾಜ್, ರಂಗನಾಥ ರಾವ್, ಎ. ಫಕೃದ್ದೀನ್, ಬದ್ರೀನಾಥ್, ರಾಮ್‌ಪ್ರಸಾದ್, ನೂರುಲ್ಲಾ, ಎ.ಎನ್. ನಿಂಗಪ್ಪ, ವಂಸತ್ ಕುಮಾರ್, ಚನ್ನಬಸವ ಶೀಲವಂತ್, ಎಂ.ವೈ. ಸತೀಶ್ ಇದ್ದರು.