ಜಿಲ್ಲೆ

ಹುಬ್ಬಳ್ಳಿಯ ವಿಘ್ನೇಶ್ವರ ನರ್ಸಿಂಗ್ ಕಾಲೇಜಿಗೆ ಪ್ರಶಸ್ತಿ

ರಮೇಶ ಜಹಗೀರದಾರ್

ಜಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನಿಲ್ ಕುಮಾರ್, ಜಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಗಿರೀಶ್ ಬೋಳಕಟ್ಟಿ, ಕ್ರೀಡಾ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಧಮನಿ, ಎ.ಎಂ. ಯಶವಂತ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಭಾಗವಹಿಸಿದ್ದರು.

ಟೂರ್ನಿಯಲ್ಲಿ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಕ್ರೀಡಾ ಕೌಶಲ ಪ್ರದರ್ಶಿಸಿ ರಂಜಿಸಿದರು. ಈ ಪಂದ್ಯಾವಳಿಯು ಕ್ರೀಡಾಪಟುಗಳಿಗೆ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದಲ್ಲದೆ, ಆರೋಗ್ಯಯುತ ಸ್ಪರ್ಧಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಯಿತು.

ಹರಪನಹಳ್ಳಿಯ ಎಸ್.ಸಿ.ಎಸ್ ಕಾಲೇಜ್ ಆಫ್ ಫಾರ್ಮಸಿ ತಂಡವು ದ್ವಿತೀಯ ಸ್ಥಾನ ಪಡೆಯಿತು. ನಾಯಕತ್ವವನ್ನು ಸುದೀಪ್ ವಹಿಸಿದ್ದರು. ಚಳ್ಳಕೆರೆಯ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸುರೇಶ್ ನಾಯಕತ್ವ ವಹಿಸಿದ್ದರು. ದಾವಣಗೆರೆಯ ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ತಂಡವು ನಾಲ್ಕನೆಯ ಸ್ಥಾನ ಗಳಿಸಿತು. ತಂಡದ ನಾಯಕತ್ವವನ್ನು ಅಭಿಷೇಕ್ ವಹಿಸಿದ್ದರು.

ನಗರದ ಜಿ.ಎಂ. ಫಾರ್ಮಸಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ವಿಘ್ನೇಶ್ವರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ತಂಡವು ಮೊದಲ ಸ್ಥಾನ ಪಡೆದುಕೊಂಡಿತು. ತಂಡದ ನಾಯಕತ್ವವನ್ನು ಉಮೇಶ್ ವಹಿಸಿದ್ದರು.

ವಿಜಯವಾಣಿ ಸುದ್ದಿಜಾಲ ದಾವಣಗೆರೆ

ಆರೋಗ್ಯ ವಿವಿ ವಲಯ ಮಟ್ಟದ ಕಬಡ್ಡಿ ಟೂರ್ನಿ  ಜಿ.ಎಂ. ಫಾರ್ಮಸಿ ಕಾಲೇಜಿನಲ್ಲಿ ಆಯೋಜನೆ

ಹುಬ್ಬಳ್ಳಿಯ ವಿಘ್ನೇಶ್ವರ ನರ್ಸಿಂಗ್ ಕಾಲೇಜಿಗೆ ಪ್ರಶಸ್ತಿ