ಜಿಲ್ಲೆ

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ರಮೇಶ ಜಹಗೀರದಾರ್

ದಾವಣಗೆರೆ : ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸರ್ ಎಂ.ವಿ. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
 ಪುರುಷರ ವಿಭಾಗದಲ್ಲಿ ನಿಹಾಲ್ ಮತ್ತು ತಂಡ (ಹ್ಯಾಂಡ್‌ಬಾಲ್), ಕೌಶಿಕ್‌ಮತ್ತು ತಂಡ (ಬ್ಯಾಸ್ಕೆಟ್ ಬಾಲ್), ಅಮೋಘ್ ಮತ್ತು ತಂಡ (ಷಟಲ್‌ಬ್ಯಾಡ್ಮಿಂಟನ್), ಪಿಯೂಷ್ ಜಾದವ್ ಮತ್ತು ತಂಡ (ಟೇಬಲ್ ಟೆನ್ನಿಸ್), ಮಲ್ಲನಗೌಡ ಮತ್ತು ತಂಡ (ಥ್ರೋ ಬಾಲ್) ಆಕಾಶ್ ಪಿ. ಕುದುರೆ, ರಾಕೇಶ್ (ಜಂಪ್ ರೋಪ್), ಬಿ.ಎನ್. ರೋಹಿತ್, ಕೆ. ಜಯದ್ವ ಮತ್ತು ಫರ್ಹಾನ್ (ಸ್ವಿಮ್ಮಿಂಗ್) ಹಾಗೂ ಸಂಜಯ್ (ಚೆಸ್) ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
  ವಿದ್ಯಾರ್ಥಿಗಳ ಆಯ್ಕೆಗೆ ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಸೈಯದ್ ಷಂಷೀರ್ ಹಾಗೂ ಸಂಸ್ಥೆ ಎಲ್ಲ ನಿರ್ದೇಶಕರು, ಪ್ರಾಚಾರ್ಯ ದೇವರಾಜ್ ಎಂ. ಸರಾಪದ, ರಾಘವೇಂದ್ರರಾವ್, ದೈಹಿಕ  ನಿರ್ದೇಶಕ ಕೆ.ಎನ್. ಕೊಟ್ರೇಶ್, ಜಿ. ನವೀನ್, ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.