ಜಿಲ್ಲೆ

ಮಹಾರಾಷ್ಟ್ರ ತಂಡಕ್ಕೆ ಸಮಗ್ರ ಚಾಂಪಿಯನ್‌ಷಿಪ್

ರಮೇಶ ಜಹಗೀರದಾರ್

ದಾವಣಗೆರೆ : ನಗರದಲ್ಲಿ ಸೋಮವಾರ ಮುಕ್ತಾಯವಾದ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ತಂಡವು 265 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ಷಿಪ್ (ಪ್ರಥಮ) ಪಡೆಯಿತು.
 ತಮಿಳುನಾಡು ತಂಡ 249 ಅಂಕಗಳೊಂದಿಗೆ ದ್ವಿತೀಯ ಹಾಗೂ ಕೇರಳ 234 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದವು.
 ಕರ್ನಾಟಕದ ಪುನೀತ್ ರಾಘವನ್ 74 ಕೆಜಿ ವಿಭಾಗದಲ್ಲಿ ಒಟ್ಟು 772.5 ಕೆಜಿ ಎತ್ತುವ ಮೂಲಕ ಭಾರತದ ಅತ್ಯುತ್ತಮ ಲಿಫ್ಟರ್ ಎನಿಸಿಕೊಂಡರು.
 ...
 (ಬಾಕ್ಸ್)
 ತಂಡ ಪ್ರಶಸ್ತಿಗಳು
 ಪುರುಷರ ಸೀನಿಯರ್ ವಿಭಾಗದಲ್ಲಿ ಮಹಾರಾಷ್ಟ್ರ (ಪ್ರಥಮ), ಕರ್ನಾಟಕ (ದ್ವಿತೀಯ), ಆಂಧ್ರಪ್ರದೇಶ (ತೃತೀಯ).
 ಮಹಿಳೆಯರ ಸೀನಿಯರ್ ವಿಭಾಗದಲ್ಲಿ ಮಹಾರಾಷ್ಟ್ರ (ಪ್ರಥಮ), ಕೇರಳ (ದ್ವಿತೀಯ), ತಮಿಳುನಾಡು (ತೃತೀಯ).
 ಪುರುಷರ ಜೂನಿಯರ್ ವಿಭಾಗದಲ್ಲಿ ತಮಿಳುನಾಡು (ಪ್ರಥಮ), ಮಹಾರಾಷ್ಟ್ರ (ದ್ವಿತೀಯ), ರಾಜಸ್ಥಾನ (ತೃತೀಯ).
 ಮಹಿಳೆಯರ ಜೂನಿಯರ್ ವಿಭಾಗದಲ್ಲಿ ಆಂಧ್ರಪ್ರದೇಶ (ಪ್ರಥಮ), ಕೇರಳ (ದ್ವಿತೀಯ), ತಮಿಳುನಾಡು (ತೃತೀಯ).
 ಸಬ್ ಜೂನಿಯರ್ ಬಾಲಕರು: ತಮಿಳುನಾಡು (ಪ್ರಥಮ), ಮಹಾರಾಷ್ಟ್ರ (ದ್ವಿತೀಯ), ಪಂಜಾಬ್ (ತೃತೀಯ).
 ಸಬ್ ಜೂನಿಯರ್ ಬಾಲಕಿಯರು: ತಮಿಳುನಾಡು (ಪ್ರಥಮ), ಪಂಜಾಬ್ (ದ್ವಿತೀಯ), ಕೇರಳ (ತೃತೀಯ).