ಜಿಲ್ಲೆ

ಮರಿಕುಂಟೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್

ರಮೇಶ ಜಹಗೀರದಾರ್

ದಾವಣಗೆರೆ :  ಶಾಸಕ ಬಿ. ದೇವೇಂದ್ರಪ್ಪ ಅವರ ಆಸಕ್ತಿಯ ಫಲವಾಗಿ ಜಗಳೂರು ತಾಲೂಕಿನಲ್ಲಿ 3.5 ಕೋಟಿ ರೂ ವೆಚ್ಚದಲ್ಲಿ 70 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದ್ದು, ಈ ಯೋಜನೆಯಡಿ ಮರಿಕುಂಟೆಯ ಸರ್ಕಾರಿ ಪ್ರೌಢಶಾಲೆಯ ಮೂರು ತರಗತಿಗಳಿಗೆ ತಲಾ 5 ಲಕ್ಷದಂತೆ 15 ಲಕ್ಷ ರೂ. ಅನುದಾನದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.  ಈ ಸ್ಮಾರ್ಟ್ ಕ್ಲಾಸ್‌ಗಳನ್ನು ಸೋಮವಾರ ಉದ್ಘಾಟಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗನಗೌಡ, ಶಿಕ್ಷಣ ಪ್ರೇಮಿ ಗೋವಿಂದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ, ಮುಖ್ಯ ಶಿಕ್ಷಕ ಕೆ.ಎಂ. ಪಂಚಾಕ್ಷರಯ್ಯ ಹಾಗೂ ಶಿಕ್ಷಕರಾದ ಎ.ಬಿ. ಶಫಿಉಲ್ಲಾ, ಟಿ. ಕರುಣಾಕರ, ಎಂ.ಡಿ. ಮಂಜುನಾಥ, ವಾಣಿ(ಪ್ರ.ದ.ಸ) ಇತರರು ಇದ್ದರು.