ಜಿಲ್ಲೆ

ನಾಲೆಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ

ರಮೇಶ ಜಹಗೀರದಾರ್

ದಾವಣಗೆರೆ : ಹರಿಹರ ತಾಲೂಕಿನ ದೇವರಬೆಳಕೆರೆಯ ಸಿದ್ದವೀರಪ್ಪ ಬಲದಂಡೆ ನಾಲೆಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಅಭಿಮಾನಿಗಳು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.  ತಮ್ಮ ಜನ್ಮ ದಿನಾಚರಣೆಗೆ ದುಂದು ವೆಚ್ಚ ಮಾಡಬೇಡಿ ಎಂದು ಸಂಸದೆ ಅಭಿಮಾನಿಗಳಿಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹರಿಹರ ತಾಲೂಕಿನ ಮುಖಂಡರಾದ ಬೆಳ್ಳೂಡಿ ಬಸವರಾಜ್ ಹಾಗೂ ಹಾಲೇಶ್ ಗೌಡ್ರು ಈ ರೀತಿ ವಿಭಿನ್ನ ಕಾರ್ಯ ಮಾಡಿದ್ದಾರೆ.  ದೇವರಬೆಳಕೆರೆ, ಕಡ್ಲೆಗುಂದಿ, ಸಲಗನಹಳ್ಳಿ, ಬನ್ನಿಕೋಡು, ಶಿವನಹಳ್ಳಿ, ಬೆಳ್ಳೂಡಿ, ಹನಗವಾಡಿ ಮಾರ್ಗವಾಗಿ ಹರಿಹರ ತಲುಪುವ ಈ ನಾಲೆಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾದರಿಯಾಗಿದ್ದಾರೆ.  ಈ ವೇಳೆ ಸತ್ಯಕುಮಾರ್ ನಂದಿಗಾವಿ, ಬಿ.ಜಿ ಉಜ್ಜಪ್ಪ, ಹನುಮಂತಪ್ಪ ಶಿವನಹಳ್ಳಿ, ಉಮೇಶ್ ಸಾರಥಿ, ಯುವರಾಜ್ ಬೆಳ್ಳೂಡಿ, ಹನುಮಂತಗೌಡ್ರು ಹೊಸಳ್ಳಿ, ಟಿ.ಜೆ. ಮುರುಗೇಶಪ್ಪ, ಎಇಇ ಕೃಷ್ಣಮೂರ್ತಿ, ಬಿ.ಪಿ. ಆಂಜನೇಯ ಶಿವನಹಳ್ಳಿ,ರಾಮನಗೌಡ, ಗ್ರಾಮಸ್ಥರು ಇದ್ದರು.