ಜಿಲ್ಲೆ

ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಬುನಾದಿ

ರಮೇಶ ಜಹಗೀರದಾರ್

ದಾವಣಗೆರೆ :  ಪ್ರಾಥಮಿಕ ಹಂತದಲ್ಲಿ ಕಲಿಯುವ ಶಿಕ್ಷಣವು ಮಕ್ಕಳಿಗೆ ಬುನಾದಿ ಇದ್ದಂತೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶಗುಫ್ತಾ ಯಾಸ್ಮಿನ್ ಹೇಳಿದರು.  ಇಲ್ಲಿನ ಯಲ್ಲಮ್ಮ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ, 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸರ್ಕಾರಿ ಶಾಲೆಗಳಲ್ಲಿ ಓದಿ ಅನೇಕರು ದೊಡ್ಡ ಸಾಧನೆ ಮಾಡಿದ್ದಾರೆ. ಈ ಹಂತದಲ್ಲಿ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡುವಂತೆ ಪಾಲಕರು ಕಾಳಜಿ ವಹಿಸಬೇಕು ಎಂದು ತಿಳಿಸಿದರು.  ಕನ್ನಡ ಶಿಕ್ಷಕಿ ಮಂಜುಳಾ ಮಾತನಾಡಿ, ಕಾನೂನಿನ ಕಣ್ಣಿಗೆ ಎಲ್ಲರೂ ಒಂದೇ. ಸಮಾನತೆ, ಸಹಬಾಳ್ವೆಯಡಿ ದೇಶ ಪ್ರಗತಿ ಸಾಧಿಸುತ್ತಿದೆ ಎಂದು ಗಣರಾಜ್ಯೋತ್ಸವದ ಅರ್ಥ, ಮಹತ್ವ ವಿವರಿಸಿದರು. ಬಿ.ಎಂ. ದಾದು ಮಾತನಾಡಿದರು.  ಎಸ್‌ಡಿಎಂಸಿ ಉಪಾಧ್ಯಕ್ಷ ತಯಾಬ್ ಅಹಮದ್, ಸದಸ್ಯರಾದ ಅಸ್ಮ ಬಾನು, ಶಕೀಲಾ ಬಾನು ಯಾಸ್ಮಿನ್, ಗುಲಶಿರಾ ಫೈರೋಜಾ, ಶಗುಪ್ತ, ಅಮೀನಾ, ಉಮ್ರ ಇದ್ದರು. ಸಹ ಶಿಕ್ಷಕಿ ಶಾತಾಜ್ ಬಾನು ಸ್ವಾಗತಿಸಿದರು. ಶಾಯಿನ್ ಪರವೀನ್ ವಂದಿಸಿದರು. ಸೈರಾ ಬಾನು, ನಾಜಿಮಾ ಖಾನುಮ್ ಅಭಿಪ್ರಾಯ ವ್ಯಕ್ತಪಡಿಸಿದರು.