ಜಿಲ್ಲೆ

ಸರ್ವೋದಯದ ಕಲ್ಪನೆ ಅರಳಲಿ

ರಮೇಶ ಜಹಗೀರದಾರ್

ದಾವಣಗೆರೆ:  ಸರ್ವೋದಯದ ಕಲ್ಪನೆಯಡಿ ಸಮಾಜವನ್ನು ಕಟ್ಟಬೇಕು ಎಂದು ಮಾಜಿ ಶಾಸಕ ಮಹಿಮ ಪಟೇಲ್ ಹೇಳಿದರು.  ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಬದಲಾವಣೆ, ಸುಧಾರಣೆ ಆಗಬೇಕು. ಅದು ಸಾಧ್ಯವಾಗಿಸಲು ಎಲ್ಲರ ಜವಾಬ್ದಾರಿ ಇದೆ. ಎಲ್ಲರನ್ನೂ ಒಳಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.  ಒಡೆದು ಆಳುವ ಮನೋಭಾವ ಹೋಗಿ ಒಟ್ಟುಗೂಡಿಸಿ ಗೆಲ್ಲಬೇಕು. ಅಂಥ ಪ್ರಯತ್ನವನ್ನು ಡಾ. ಶಾಮನೂರು ಶಿವಶಂಕರಪ್ಪ ಅವರು ಮಾಡಿದ್ದಾರೆ. ಸಮಾಜ ಕಟ್ಟುವುದೆಂದರೆ ದೇವಸ್ಥಾನ ನಿರ್ಮಿಸಿದಂತೆ. ಕೆಟ್ಟ ದಾರಿಯಲ್ಲಿ ಸಾಗುವವರು ಅಸಾಧ್ಯ ಎಂಬ ಮಾತು ಹೇಳುತ್ತಾರೆ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದರು.  ಗುರು-ವಿರಕ್ತರು ಇಬ್ಬರೂ ಭಕ್ತರ ಪರವಾಗಿ ಇರುವವರು. ಹಾಗಾಗಿ ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.