ಜಿಲ್ಲೆ

ಮಕ್ಕಳಿಗೆ ಮನೆಯಲ್ಲೇ ಸಿಗಬೇಕು ಸಂಸ್ಕಾರ

ರಮೇಶ ಜಹಗೀರದಾರ್

ದಾವಣಗೆರೆ : ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು ಅಲ್ಲಿಯೇ ಉತ್ತಮ ಸಂಸ್ಕಾರ ಹೇಳಿಕೊಡಬೇಕು ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಪಾಲಕರಿಗೆ ಕಿವಿಮಾತು ಹೇಳಿದರು.
 ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಗರ ಮತ್ತು ಜಿಲ್ಲಾ ಯುವ ಘಟಕದಿಂದ ಸಮಾಜದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸಂಜೆ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಾಧಕ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಇಂದಿನ ಆಧುನಿಕ ಯುಗದಲ್ಲಿ ತಂದೆ ತಾಯಿಗಳೂ ಸಹ ಸಮಯದ ಅಭಾವ ಎಂದು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡದೆ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ವಿದ್ಯಾರ್ಥಿಗಳು ಮತ್ತು ಪಾಲಕರು ಮೊಬೈಲ್ಗೆ ಕೊಡುವ ಸಮಯದ ಅರ್ಧ ವೇಳೆಯನ್ನು ಶಿಕ್ಷಣಕ್ಕೆ ಕೊಟ್ಟಲ್ಲಿ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
 ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ. ಶಿವಕುಮಾರ್ ಮಾತನಾಡಿ ಪ್ರತಿ ವರ್ಷವೂ ಯುವ ಘಟಕದ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಹಮ್ಮಿಕೊಂಡು ಉತ್ತಮ ಸಾಧನೆಗೈದ ಸಮಾಜದ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
 ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ವಾಗೀಶ್ ಮಲ್ಕಿ ಒಡೆಯರ್, ನೀಲನಗೌಡ್ರು, ಕೊಟ್ರೇಶ್, ಈಶಪ್ಪ, ರಶ್ಮಿ ಐನಳ್ಳಿ ಅವರನ್ನು ಸನ್ಮಾನಿಸಲಾಯಿತು.
 ಯುವ ಘಟಕದ ಸ್ವರೂಪ ಅಂಗಡಿ, ಬಾದಾಮಿ ಜಯ್ಯಣ್ಣ, ಜಿಲ್ಲಾ ಉಪಾದ್ಯಕ್ಷ ಎಂ. ದೊಡ್ಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿನಾಥ್, ಜಿಲ್ಲಾ ನೌಕರರ ಘಟಕದ ಅಧ್ಯಕ್ಷ ಶ್ರೀಧರ್, ತಾಲೂಕು ಅಧ್ಯಕ್ಷ  ಮಲ್ಲಿನಾಥ್, ಉಪನ್ಯಾಸಕ ಸಂಪತ್ ಕುಮಾರ, ಮಹಿಳಾ ಘಟಕದ ಬೆಳ್ಳೂಡಿ ವೀಣಾ ನಟರಾಜ್ ಇದ್ದರು. ಕುಮಾರ್ ಹುಂಬಿ ಸ್ವಾಗತಿಸಿದರು. ಶಿವಕುಮಾರ ಹೊಸಕೆರೆ ನಿರೂಪಿಸಿದರು.