ಜಿಲ್ಲೆ

ರಾಷ್ಟ್ರೋತ್ಥಾನ ಕಾಲೇಜಿಗೆ ಉತ್ತಮ ಫಲಿತಾಂಶ

ರಮೇಶ ಜಹಗೀರದಾರ್

ದಾವಣಗೆರೆ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ.  ಕಾಲೇಜಿನ 15 ವಿದ್ಯಾರ್ಥಿಗಳ ಪೈಕಿ 10 ಮಂದಿ ಉನ್ನತ ಶ್ರೇಣಿಯಲ್ಲಿ, 5 ಜನ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಸಾನಿಕ ಶೇ. 94 ಅಂಕಗಳೊಂದಿಗೆ ಕಾಲೇಜಿನ ಟಾಪರ್ ಆಗಿದ್ದಾರೆ. ಎಚ್.ಎಸ್. ಬಿಂದು ಶೇ. 94, ಅಂಜನ ಶೇ. 90, ಸ್ನೇಹ ಬಣಕಾರ್ ಶೇ. 90 ಫಲಿತಾಂಶ ಪಡೆದಿದ್ದಾರೆ.  ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಶೇ. 100 ಫಲಿತಾಂಶ ಬಂದಿದೆ ಎಂದು ಕಾರ್ಯದರ್ಶಿ ಜಯಣ್ಣ ತಿಳಿಸಿದ್ದಾರೆ.