ಜಿಲ್ಲೆ

ಟೀಮ್ ಅಕಾಡೆಮಿಯ ಪಕ್ಕಿರೇಶ್‌ಗೆ 160ನೇ ರ‌್ಯಾಂಕ್

ದಾವಣಗೆರೆ : ಈ ಬಾರಿಯ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ನಗರದ ದಿ ಟೀಮ್ ಅಕಾಡೆಮಿಯ ವಿದ್ಯಾರ್ಥಿ ಟಿ. ಪಕ್ಕಿರೇಶ್ ಇಂಜಿನಿಯರಿಂಗ್‌ನಲ್ಲಿ 160ನೇ ರ‌್ಯಾಂಕ್ ಗಳಿಸಿದ್ದಾನೆ.
 ಟಿ. ತೇಜಸ್ 487ನೇ ರ‌್ಯಾಂಕ್, ಮತ್ತು ಹರ್ಷವರ್ಧನ್ ಎಚ್. ಪಾಟಿಲ್ 1417ನೇ ರ‌್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ದಿ ಟೀಮ್ ಅಕಾಡೆಮಿಯ ಅಧ್ಯಕ್ಷ ಕೆ.ಎಂ. ಮಂಜಪ್ಪ, ಕಾರ್ಯದರ್ಶಿ ಎಸ್.ವಿ.ವಿ.ಆರ್ ಭೂಷಣಮ್, ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.