ಜಿಲ್ಲೆ

ಅನ್‌ಮೋಲ್ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ

ರಮೇಶ ಜಹಗೀರದಾರ್

ದಾವಣಗೆರೆ: ಸಮೀಪದ ಶಿರಮಗೊಂಡನಹಳ್ಳಿಯ ಅನ್‌ಮೋಲ್ ಪಬ್ಲಿಕ್ ಶಾಲೆಗೆ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದೊರೆತಿದೆ. ಶಾಲೆಯ 15 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ತನೀಷ್ ಎಂ., ರಿತಿಕಾ ವಿನ್ಯಾ ಎಸ್. ಹಾಗೂ ಯಶವಂತ್ ಎಚ್.ಜಿ. ಇವರು ಅಂಕ ಗಳಿಕೆಯಲ್ಲಿ ಶಾಲೆಗೆ ಮೊದಲ ಮೂರು ಸ್ಥಾನಗಳಿಗೆ ಭಾಜನರಾಗಿದ್ದಾರೆ.