ದಾವಣಗೆರೆ: ನಗರದ ದಿ ಟೀಮ್ ಅಕಾಡೆಮಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99.99 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಕಾಲೇಜಿನ ಒಟ್ಟು 526 ವಿದ್ಯಾರ್ಥಿಗಳಲ್ಲಿ 524 ಮಂದಿ ತೇರ್ಗಡೆಯಾಗಿದ್ದು, 9 ಡಿಸ್ಟಿಂಕ್ಷನ್, 205 ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸ್ಪೂರ್ತಿ ಎಸ್. ಸಂಕಣ್ಣನವರ್ ಮತ್ತು ತನುಜಾ ಡಿ. 600 ಕ್ಕೆ 587 ಅಂಕ ಗಳಿಸಿದ್ದಾರೆ.
ಕನ್ನಡದಲ್ಲಿ 6, ಸಂಸ್ಕೃತದಲ್ಲಿ 04, ರಸಾಯನಶಾಸ್ತ್ರದಲ್ಲಿ 6, ಗಣಿತದಲ್ಲಿ 10, ಜೀವಶಾಸ್ತ್ರದಲ್ಲಿ 16, ಗಣಕ ವಿಜ್ಞಾನದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.