ಜಿಲ್ಲೆ

ಶೀಘ್ರವೇ ವೀರಶೈವ ಲಿಂಗಾಯತ ಮಠಾಧೀಶರೊಂದಿಗೆ ಸಭೆ

ರಮೇಶ ಜಹಗೀರದಾರ್

ದಾವಣಗೆರೆ : ವೀರಶೈವ ಲಿಂಗಾಯತ ಒಳ ಪಂಗಡಗಳ ಮಠಾಧೀಶರ ಜತೆಗೆ ಪೂರ್ವಭಾವಿ ಸಭೆಯನ್ನು ಶೀಘ್ರವೇ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.  ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ತಾವು ಈಗಾಗಲೇ ಹಲವು ಮಠಾಧೀಶರ ಜತೆಗೆ ಮಾತನಾಡಿರುವುದಾಗಿ ತಿಳಿಸಿದರು.  ಮುಂಬರುವ ದಿನಗಳಲ್ಲಿ ದೊಡ್ಡ ಸಮಾವೇಶವೊಂದನ್ನು ಆಯೋಜಿಸಿ ಇಡೀ ಸಮಾಜ ಈಗಲೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಗಟ್ಟಿಯಾಗಿದೆ ಎಂಬ ಸಂದೇಶ ರವಾನಿಸಲಾಗುವುದು. ಭವಿಷ್ಯದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಸಿಎಂ ಮಾಡುವುದು ನಮ್ಮ ಸಂಕಲ್ಪ. ಅದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.  ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಈ ಹಿಂದೆ ಅವರು ಸಿಎಂ ಆಗಲು ವೀರಶೈವ ಲಿಂಗಾಯತ ಒಳಪಂಗಡಗಳ ಮಠಾಧೀಶರು ಸೇರಿದಂತೆ ಎಲ್ಲ ಸಮಾಜಗಳೂ ಬೆಂಬಲಿಸಿದವು. ಮುಂದೆಯೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಕೆಲವು ಸ್ವಯಂ ಘೋಷಿತ ನಾಯಕರು ಯಡಿಯೂರಪ್ಪ ಅವರ ಜತೆಗೆ ಸಮಾಜ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ‘ಅವರೆಲ್ಲ ಡಮ್ಮಿಗಳು, ತಿರಸ್ಕೃತ ನಾಣ್ಯಗಳು’ ಎಂದು ಟೀಕಿಸಿದರು.