ದಾವಣಗೆರೆ: ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ ಕ್ಯೂಬಿಕ್‌ನ್ನು ಒಂದೆಡೆ ಸೇರಿಸುವ ಮೂಲಕ ನಗರದ ಏಳು ವರ್ಷದ ಬಾಲಕಿಯೊಬ್ಬಳು ವಿಶ್ವ ದಾಖಲೆ ಮಾಡಿದ್ದಾಳೆ. ನಗರದ ಎಸ್ ಸ್ತುತಿ ಕಣ್ಣುಮುಚ್ಚಿ ಕೇವಲ 26.95 ಸೆಕೆಂಡ್‌ಗಳಲ್ಲಿ ಪಿರಾಮಿಂಕ್ಸ್ ರೂಬಿಕ್ ಕ್ಯೂಬ್ ಅನ್ನು ಅತ್ಯಂತ ವೇಗವಾಗಿ ಒಂದೆಡೆ ಸೇರಿಸಿ ಈ ಸಾಧನೆಗೆ ಪಾತ್ರಳಾಗಿದ್ದಾಳೆ. ನಗರದ ಆರಿಜಿನ್ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಸ್ತುತಿ ಗಾಂಧಾರಿ ವಿದ್ಯೆ (ಜಿ ಆ್ಟಜ್ಞಿ ಅ್ಚಠಿಜಿಠಿಜಿಟ್ಞ) ತರಬೇತಿ ಪಡೆದಿದ್ದಾಳೆ. ಕಣ್ಣುಮುಚ್ಚಿ ಬಣ್ಣ ಗುರುತಿಸುವುದು, ಓದುವುದು, ಬರೆಯುವುದು ಹಾಗೂ ಚಿತ್ರಗಳಿಗೆ ಬಣ್ಣ ತುಂಬುವುದರಲ್ಲಿ ಉತ್ಕೃಷ್ಟ ಜ್ಞಾನ ಹೊಂದಿರುವ ಸ್ತುತಿ ಭರತನಾಟ್ಯ, ಚೆಸ್ ಸ್ಪರ್ಧೆಯಲ್ಲೂ ಪ್ರವೀಣೆ. ಬಾಲಕಿ ಸ್ತುತಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ರಾಜ್ಯಾಧ್ಯಕ್ಷ ನಗರದ ಎಸ್.ಕೆ.ಪಿ. ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷ ಎಸ್.ಸುನಿಲ್ ಮತ್ತು ಚಂದ್ರಿಕಾ ದಂಪತಿ ಪುತ್ರಿ.