ದಾವಣಗೆರೆ : ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಶ್ರೀ ಗುರುರಾಯರ ವೃಂದಾವನಕ್ಕೆ ಅವಭೃತ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಗುರು ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವವೂ ವಿಜೃಂಭಣೆಯಿಂದ ನೆರವೇರಿತು.
ಅವಭೃತ ಸೇವೆಯಲ್ಲಿ ನಾಗರಾಜ್, ರಾಜಣ್ಣ, ಪ್ರಕಾಶ್ ನಾಡಿಗೇರ್, ಸುಶಿಲೇಂದ್ರಚಾರ್, ಬದರೀಶ್ ದೇವಳೆ, ವಾದಿರಾಜ್ ಹಂದಿಗೋಳ್, ಶ್ರೀಕಾಂತ್ ಭಾದ್ರಿ, ಬದರಿಪ್ರಸಾದ್, ಸುಶಮೀಂದ್ರ ರಾವ್, ಸಮೀರ್ ದೇವಳೆ, ಶ್ರೀರಾಂ ನಾಡಿಗೇರ್, ಶ್ರೀನಿವಾಸ ನಾಡಿಗೇರ್, ಆದಿತ್ಯ ದಿಡ್ಡಿ, ಅನಿಲ್, ಸುನೀಲ್, ದರ್ಶನ್ ಪುರಾಣಿಕ್, ಪವನ್, ಜಿ.ಜೆ. ವಿನೋದ್, ಅಮೋಘ ದೇವಳೆ, ಕೌಶಿಕ್, ಸುಘೋಷ್, ಸಚಿನ್ ಬಂಡಿವಾಡ್, ಶ್ರೀಶಾಂತ್ ಭಾದ್ರಿ ಹಾಗೂ ಭಾರತೀ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.