ದಾವಣಗೆರೆ : ಈ ಬಾರಿಯ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಡಿ.ಎಸ್. ಯಶವಂತ ರಾಷ್ಟ್ರಮಟ್ಟದಲ್ಲಿ 64ನೇ ರ‌್ಯಾಂಕ್ ಗಳಿಸಿದ್ದಾರೆ. ಸಿ.ವಿ. ನಂದನ್ ಕುಮಾರ್ 95.15 ಪರ್ಸಂಟೈಲ್ ಪಡೆದಿದ್ದಾರೆ. ಕೆ.ವಿ. ವರುಣ್ 237 ನೇ ರ‌್ಯಾಂಕ್, ಬಿ.ಜೆ. ಶ್ರೀನಿವಾಸ್ 244 ನೇ ರ‌್ಯಾಂಕ್, ಎಂ. ಸಾನಿಧ್ಯ 253 ನೇ ರ‌್ಯಾಂಕ್, ಡಿ.ಜೆ. ಹಾಲಸ್ವಾಮಿ 313 ನೇ ರ‌್ಯಾಂಕ್, ಎನ್.ಬಿ. ಮಹಮ್ಮದ್ ಮೊಹಸಿನ್ 806 ನೇ ರ‌್ಯಾಂಕ್, ನಿರಂಜನ್ ಬಡಿಗೇರ್ 904ನೇ ರ‌್ಯಾಂಕ್ ಪಡೆದಿದ್ದಾರೆ. ಕಾಲೇಜಿನ ಒಟ್ಟು 38 ವಿದ್ಯಾರ್ಥಿಗಳು ಜೆ.ಇ.ಇ.-ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಗಮೇಶ್ವರ ಗೌಡರು, ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ. ಎಸ್. ಪ್ರಸಾದ್ ಬಂಗೇರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.