ದಾವಣಗೆರೆ : ಇತ್ತೀಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಎಂ.ಬಿ.ಎ ಸ್ನಾತಕೋತ್ತರ ವಿಭಾಗದಲ್ಲಿ ನಗರದ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜಮೆಂಟ್ ಆ್ಯಂಡ್ ರಿಸರ್ಚ್‌ನ 6 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದಾರೆ. ಅಕ್ಷತಾ ಸಿ. ಮುದಗಲ್ (2ನೇ ರ‌್ಯಾಂಕ್), ರೂಪಾ ಚಿಗಟೇರಿ (3ನೇ ರ‌್ಯಾಂಕ್), ಟಿ.ಎಲ್. ವಿದ್ಯಾಶ್ರೀ (4ನೇ ರ‌್ಯಾಂಕ್), ಕೆ.ಎಸ್. ಮೇಘನಾ (6ನೇ ರ‌್ಯಾಂಕ್), ನಿಖಿತಾ (7ನೇ ರ‌್ಯಾಂಕ್) ಮತ್ತು ಪಿ. ಸತ್ಯಹಾರಿಕ (10ನೇ ರ‌್ಯಾಂಕ್) ಪಡೆದಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಬಾಪೂಜಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ್, ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ, ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಮತ್ತು ಬೋಧಕ, ಬೋಧಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.