ಜಿಲ್ಲೆ

ರಾಮ ತಾರಕ ಹೋಮ, ಮಂತ್ರ ಜಪ

ರಮೇಶ ಜಹಗೀರದಾರ್

ದಾವಣಗೆರೆ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಗರದ ಕೆ.ಬಿ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಶ್ರೀ ರಾಮ ತಾರಕ ಹೋಮ ಮತ್ತು ರಾಮ ಮಂತ್ರದ ಜಪ ನೆರವೇರಿತು.
 ಬೆಳಗ್ಗೆ ಎಂದಿನಂತೆ ರಾಯರಿಗೆ ಪೂಜೆ ನೆರವೇರಿಸಲಾಯಿತು. ನಂತರ 50ಕ್ಕೂ ಹೆಚ್ಚು ಭಕ್ತರು 50 ಸಾವಿರಕ್ಕೂ ಹೆಚ್ಚು ಜಪ ಮಾಡುವ ಮೂಲಕ ಅಯೋಧ್ಯೆಯಲ್ಲಿ ಪ್ರತಿಷ್ಠಾಪನಾ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ. ಎಲ್ಲರಿಗೂ ರಾಮ ದೇವರು ಅನುಗ್ರಹ ಮಾಡಲಿ. ಮಳೆ, ಬೆಳೆ ಸಮೃದ್ಧಿಯಾಗಿ ಆಗಲಿ ಎಂದು ಪ್ರಾರ್ಥಿಸಲಾಯಿತು. ಅರ್ಚನೆ ಮಾಡಲಾಯಿತು.
 ಹೋಮವನ್ನು ಕಡೂರು ಪ್ರಾಣೇಶಾಚಾರ್ ನಡೆಸಿಕೊಟ್ಟರು. ಕಂಪ್ಲಿ ಗುರುರಾಜಾಚಾರ್, ಆನಂದ ತೀರ್ಥಾಚಾರ್, ವಾಚಸ್ಪತಿ ಆಚಾರ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಶಶಿಕಾಂತ್, ಗೌರವಾಧ್ಯಕ್ಷ ಸತ್ಯನಾರಾಯಣ ರಾವ್ ಅನೇಕ ಭಕ್ತರು ಪಾಲ್ಗೊಂಡಿದ್ದರು. ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೋ.ಸ. ಪ್ರಸನ್ನ ಕುಮಾರ್ ಅಗತ್ಯ ವ್ಯವಸ್ಥೆ ಕೈಗೊಂಡಿದ್ದರು.