ಜಿಲ್ಲೆ

ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಅಬ್ಬರ

ರಮೇಶ ಜಹಗೀರದಾರ್

ದಾವಣಗೆರೆ :  ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಅವಾಂತರ ಸೃಷ್ಟಿಸಿದೆ. ಹಲವು ಕೆರೆಗಳಿಗೆ ಕೋಡಿ ಬಿದ್ದಿದ್ದು ಬೆಳೆಗಳು ಜಲಾವೃತವಾಗಿವೆ. ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 50 ಮನೆಗಳಿಗೆ ಹಾನಿಯಾಗಿದೆ.  ಜಗಳೂರು ತಾಲೂಕಿನಲ್ಲಿ 3 ಕೆರೆಗಳಿಗೆ ಕೋಡಿ ಬಿದ್ದಿದೆ. ನಿಬಗೂರು ಕೆರೆಯ ಏರಿ ಬಿರುಕು ಬಿಟ್ಟಿದೆ. ಕೆಳಗೋಟೆ ಕೆರೆಯ ತೂಬು ಸೋರಿಕೆಯಾಗುತ್ತಿದೆ. ಕೊರಟಿಕೆರೆ ಸೇತುವೆ ಬಳಿ ಮಣ್ಣು ಕುಸಿದಿದೆ. ಮೆಕ್ಕೆಜೋಳ, ಶೇಂಗಾ, ರಾಗಿ ಬೆಳೆಗಳಿಗೆ ಹಾನಿಯಾಗಿದೆ.  ದಾವಣಗೆರೆ ತಾಲೂಕು ಆನಗೋಡು ಹೋಬಳಿ ಚಿನ್ನಸಮುದ್ರ ಗ್ರಾಮದ ಬಳಿ ಹಳ್ಳ ತುಂಬಿ ಹರಿದು ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ನರಗನಹಳ್ಳಿ, ಮಾಯಕೊಂಡ ಕೆರೆಗಳಿಗೆ ಕೋಡಿ ಬಿದ್ದಿದೆ. ಮೆಕ್ಕೆಜೋಳ, ಅಡಕೆ ತೋಟಗಳು ಜಲಾವೃತವಾಗಿವೆ.  ಚನ್ನಗಿರಿ-ಗಾಂಧಿನಗರ ನಡುವಿನ ಹಳ್ಳ ತುಂಬಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ತಿಳಿನೀರು ಕಟ್ಟೆ ಗ್ರಾಮದಲ್ಲಿ 2 ಮನೆಗಳಿಗೆ ನೀರು ನುಗ್ಗಿತ್ತು. ನ್ಯಾಮತಿ ತಾಲೂಕಿನಲ್ಲಿ ಮೆಕ್ಕೆಜೋಳ ಕಟಾವಿಗೆ ತೊಂದರೆಯಾಗಿದೆ.  ...  (ಬಾಕ್ಸ್)  ಎಲ್ಲೆಲ್ಲಿ ಎಷ್ಟು ಮಿ.ಮೀ?  ಜಿಲ್ಲಾದ್ಯಂತ ಸರಾಸರಿ 43.9 ಮಿ.ಮೀ. ಮಳೆಯಾಗಿದೆ. ನ್ಯಾಮತಿ ತಾಲೂಕಿನಲ್ಲಿ ಅತಿ ಹೆಚ್ಚು 63.4 ಮಿ.ಮೀ, ಹೊನ್ನಾಳಿ 52.6 ಮಿ.ಮೀ, ಚನ್ನಗಿರಿ 50.1 ಮಿ.ಮೀ, ದಾವಣಗೆರೆ 43.1 ಮಿ.ಮೀ, ಹರಿಹರ 30 ಮಿ.ಮೀ, ಜಗಳೂರು ತಾಲೂಕಿನಲ್ಲಿ 31.8 ಮಿ.ಮೀ. ಸುರಿದಿದೆ. ಜಿಲ್ಲೆಯಲ್ಲಿ ಮಳೆಯಿಂದ 39.30 ಲಕ್ಷ ರೂ. ನಷ್ಟ ಸಂಭವಿಸಿದೆ.