ದಾವಣಗೆರೆ : ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಶನಿವಾರ ಸಂಭ್ರಮದಿಂದ ನಡೆಯಿತು.
ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರಾಂಭೋವಿ ನೆರವಣಿಗೆ ಉದ್ಘಾಟಿಸಿದರು.
ಮೆರವಣಿಗೆಯು ಗುಂಡಿ ವೃತ್ತ, ಬಾಪೂಜಿ ದಂತ ವೈದ್ಯಕೀಯ ಕಾಲೇಜು, ದೃಶ್ಯಕಲಾ ಮಹಾವಿದ್ಯಾಲಯ ಮಾರ್ಗವಾಗಿ ಕುವೆಂಪು ಕನ್ನಡ ಭವನವನ್ನು ತಲುಪಿತು. ಮಾರ್ಗದುದ್ದಕ್ಕೂ ಕನ್ನಡದ ಧ್ವಜಗಳು, ಬಾಳೆ ಕಂದು, ಬಂಟಿಂಗ್‌ಗಳು ಕಂಡುಬಂದವು.
ಬಸಾಪುರದ ಬಸವ ಕಲಾಲೋಕ ತಂಡದ ನಂದಿಕೋಲು, ಕುರ್ಕಿಯ ದುರ್ಗಮ್ಮ ದೇವಿ ಕೋಲಾಟ ಕಲಾ ಸಂಘ, ನಾಸಿಕ್ ಡೋಲು, ಮಲೇಬೆನ್ನೂರಿನ ವೀರಗಾಸೆ ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದುಕೊಟ್ಟವು.
ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತರಲಾಯಿತು. ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಶಿವಾನಂದ ಗುರೂಜಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಇದ್ದರು.