ದಾವಣಗೆರೆ : ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾಮಟ್ಟದಲ್ಲಿ ಚಾಲನೆ ದೊರೆಯಲಿದ್ದು, ಅದರ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಂಗಳವಾರ ಪರಿಶೀಲಿಸಿದರು.
ಕಾರ್ಯಕ್ರಮದ ವೇದಿಕೆ, ನೇರಪ್ರಸಾರದ ಸಿದ್ಧತೆ, ಫಲಾನುಭವಿಗಳಿಗೆ ಊಟ, ಉಪಚಾರದ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು. ಎಲ್ಲವೂ ಸುವ್ಯವಸ್ಥಿತವಾಗಿ ನಡೆಯಬೇಕು ಎಂದು ಸೂಚನೆ ಕೊಟ್ಟರು. ಅಧಿಕಾರಿಗಳಾದ ಮಹಾಂತೇಶ್, ಸುನೀಲ್ ಇದ್ದರು. ಜಿಲ್ಲಾ ಮಟ್ಟದ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.
ಯೋಜನೆಗೆ ನಗರದ 11 ಕಡೆ ವಿವಿಧ ಸ್ಥಳಗಳಲ್ಲಿ ಮತ್ತು ಎಲ್ಲ ತಾಲೂಕುಗಳಲ್ಲಿ ಚಾಲನೆ ನೀಡಲಾಗುವುದು.
ಪಾಲಿಕೆ ಕಚೇರಿ, ಪಿ.ಬಿ. ರಸ್ತೆ (ವಾರ್ಡ್ ನಂ.25, 17), ಮಹಾನಗರ ಪಾಲಿಕೆ ಕಚೇರಿ 3 ವಿಭಾಗ (ವಾರ್ಡ್ ನಂ.25), ನೂರಾನಿ ಶಾದಿ ಮಹಲ್, ಇಮಾಂ ನಗರ (ವಾರ್ಡ್ ನಂ.11), ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರ, ಗಡಿಯಾರ ಕಂಬದ ಹತ್ತಿರ (ವಾರ್ಡ್ ನಂ. 18), ಮಲ್ಲಿಕಾರ್ಜುನ ಸಮುದಾಯ ಭವನ, ಆರ್.ಎಂ.ಸಿ. ರಸ್ತೆ, ಬಂಬೂ ಬಜಾರ್ (ವಾರ್ಡ್ ನಂ.20, 21), ಗೋಲ್ಡನ್ ಪ್ಯಾಲೇಸ್ ಬೂದಾಳ್ ರೋಡ್, ರಿಂಗ್ ರಸ್ತೆ, (ವಾರ್ಡ್ ನಂ. 5), ಯಲ್ಲಮ್ಮ ದೇವಿ ಸಮುದಾಯ ಭವನ, ಜಾಲಿನಗರ (ವಾರ್ಡ್ ನಂ. 7), ಚಿದಂಬರ ದೇವಸ್ಥಾನ ಸಮುದಾಯ ಭವನ , ನಿಟ್ಟುವಳ್ಳಿ (ವಾರ್ಡ್ ನಂ.29), ಅಂಬೇಡ್ಕರ್ ಸಮುದಾಯ ಭವನ, ಗಾಂಧಿ ನಗರ (ವಾರ್ಡ್ ನಂ.1) ಇಲ್ಲಿ ಕಾರ್ಯಕ್ರಮ ನಡೆಯಲಿದೆ.