ಜಿಲ್ಲೆ

ಪ್ರವಚನ ಮಂಗಳ ಮಹೋತ್ಸವ

ರಮೇಶ ಜಹಗೀರದಾರ್

ದಾವಣಗೆರೆ :  ಶ್ರೀ ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ ಅಂಗವಾಗಿ ಪ್ರವಚನ ಮಂಗಳ ಮಹೋತ್ಸವ, ಶ್ರೀ ಧನ್ವಂತರಿ ಮತ್ತು ಪವಮಾನ ಹೋಮಗಳು ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಭಾನುವಾರ ನೆರವೇರಿದವು.  ವೇದ ಪಂಡಿತ ನರಹರಿ ಆಚಾರ್ಯ ಮುತ್ತಗಿ ಅವರು ‘ಸಮಾಜಕ್ಕೆ ರಾಮಾಯಣದ ಕೊಡುಗೆ’ ವಿಷಯದ ಕುರಿತು ಪ್ರವಚನ ನೀಡಿದ್ದರು. ಅದರ ಮಂಗಳ ಮಹೋತ್ಸವ ನಡೆಯಿತು.  ಇದೇ ಸಂದರ್ಭದಲ್ಲಿ, ಶ್ರೀ ಮಾಧ್ವ ಯುವಕ ಸಂಘದ ಸಂಸ್ಥಾಪಕ ಪದಾಧಿಕಾರಿಗಳಾದ ಗೋಪಾಲಾಚಾರ್ಯ ಮಣ್ಣೂರು, ಗುರುರಾಜಾಚಾರ್ಯ ಕಂಪ್ಲಿ ಮತ್ತು ವಿ. ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕಡೂರ್ ಪ್ರಾಣೇಶ ಆಚಾರ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.  ಹೋಮದ ಸೇವಾ ಕರ್ತೃಗಳಾಗಿ ಸಂಪನ್ನ ಮುತಾಲಿಕ್ ದಂಪತಿ ಹಾಗೂ ಗೋಪಾಲ್ ಮುತ್ತಿಗಿ ದಂಪತಿ ಪಾಲ್ಗೊಂಡಿದ್ದರು. ಹೋಮ ಕಾರ್ಯದ ನೇತೃತ್ವವನ್ನು ಕಡೂರ್ ವಾಚಸ್ಪತಿ ಆಚಾರ್, ಧೀರಣ್ಣ ಯಜುರ್ವೇದಿ, ರಾಮಚಂದ್ರ ಮಣ್ಣೂರ್, ಗುರುರಾಜ, ಮೂಗೂರು ಶ್ರೀನಿವಾಸ್, ನಾಗೇಶ್ ಪಾಟೀಲ್, ನರಸಿಂಹ ಆಚಾರ್ ಮಣ್ಣೂರು ವಹಿಸಿದ್ದರು. ನಂತರ ತೀರ್ಥ ಪ್ರಸಾದ ಮಾಡಲಾಯಿತು.  ಸಮಾಜದ ಮುಖಂಡರಾದ ಪ್ರಕಾಶ್ ಪಾಟೀಲ್, ರಘುನಾಥ್, ಬದರಿ ನಾರಾಯಣ್, ಆನಂದ ತೀರ್ಥಾಚಾರ್, ಗುರುರಾಜ ಸಾಹುಕಾರ್, ಮಧುಸೂದನ್, ವಿಠ್ಠಲ್ ಪುರಾಣಿಕ್, ರಘು (ಬಿಎಸ್‌ಎನ್‌ಎಲ್), ಶ್ರೀನಿವಾಸ್ ನರಗನಹಳ್ಳಿ, ಸುಬ್ಬಣ್ಣ ನಾಯ್ಕ್ ಹಲಗೇರಿ, ವಾಗೀಶ ಆಚಾರ್, ವಾಸುದೇವಾಚಾರ್ ಪಲ್ಲಕ್ಕಿ, ರಾಜಣ್ಣ ಪಾಲ್ಗೊಂಡಿದ್ದರು.