ದಾವಣಗೆರೆ: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ, ಅವರಿಂದ ರಚಿತವಾದ ‘ಪ್ರಾತಃ ಸಂಕಲ್ಪ ಗದ್ಯ’ದ ಪಾರಾಯಣ ಪೂರ್ವಕ ಪ್ರವಚನ ಕಾರ್ಯಕ್ರಮ ನಗರದ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರದಿಂದ ಆ. 15ರ ವರೆಗೆ ನಡೆಯಲಿದೆ. ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಅವರು ಪ್ರತಿ ದಿನ ಸಂಜೆ 6.30ರಿಂದ 7.30ರ ವರೆಗೆ ಪ್ರವಚನ ನಡೆಸಿಕೊಡುವರು. ಭಕ್ತರು ಪಾಲ್ಗೊಳ್ಳುವಂತೆ ವ್ಯವಸ್ಥಾಪಕ ಸುತೀರ್ಥ ಕಟ್ಟಿ ತಿಳಿಸಿದ್ದಾರೆ.